ಭಾರತ, ನವೆಂಬರ್ 24 -- ಬೆಂಗಳೂರು: ವಿದ್ಯಾರ್ಥಿಗಳಿಗೆ ಅಸಾಧ್ಯ ಎನ್ನುವುದು ಯಾವುದು ಇಲ್ಲ. ಮನೋಬಲದಿಂದ ತಮ್ಮ ಕನಸುಗಳನ್ನು ಸಾಧಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಜಿಮ್ಸ್ ಗ್ರಂಥಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ತಾರ್ಕಿಕ ಚಿಂತನೆಯೇ ವಿದ್ಯಾರ್ಥಿಗಳ ಯಶಸ್ಸಿನ ಮೆಟ್ಟಿಲು. ಒಮ್ಮೆ ವಿದ್ಯಾರ್ಥಿಯಾದರೆ ಜೀವನದಲ್ಲಿ ಎಂದೆಂದಿಗೂ ವಿದ್ಯಾರ್ಥಿಯೇ. ಶಿಕ್ಷಣದಲ್ಲಿ ಮೊದಲು ಪಾಠ ನಂತರ ಪರೀಕ್ಷೆ, ಆದರೆ ಬದುಕಿನಲ್ಲಿ ಮೊದಲು ಪಾಠ , ನಂತರ ಪರೀಕ್ಷೆ. ತಮ್ಮ ಗುರಿಗಳನ್ನು ಸಾಧಿಸಲು ಶ್ರಮಿಸಬೇಕು ಎಂದರು.

ಯುವಜನರು ಜಾಗೂರಾಗಿರಬೇಕು :

ಇಂದಿನ‌ ಕಾರ್ಯಕ್ರಮ ನೋಡಿದ ಮೇಲೆ ನನ್ನ ಕಾಲೇಜು ಜೀವನ ನೆನಪಾಯಿತು. ಕಾಲೇಜು ದಿನಗಳು ಎಲ್ಲ ವಿದ್ಯಾರ್ಥಿಗಳ ಸುಂದರ ದಿನಗಳು. ನೀವು ಶಕ್ತಿ, ಗುರಿ, ಕನಸು ಹಾಗೂ ಗುರಿಯನ್ನು ಸಾಧಿಸುವ ಛಲವನ್ನು ಹೊಂದಿರುವ ಸುರ್ವಣ ಸಮಯವಾಗಿದ್ದು, ಯುವಜನರು ಬಹಳ ಜವಾಬ್ದಾರಿಯಿಂದ , ಜಾಗೂರಾಗಿರಬೇಕು. ವಿದ್ಯಾ...