ಭಾರತ, ಫೆಬ್ರವರಿ 2 -- ಒಂದಾನೊಂದು ಕಾಲದಲ್ಲಿ(1960s) ಕಂಪ್ಯೂಟರ್ ಮೊದಲ ಸಲ ಜಗತ್ತಿಗೆ ಕಾಲಿಟ್ಟಾಗ ಆಗಿನ್ನೂ ಅದು ಎಳಸು ಇದ್ದು ಆಗಿನ ಅಗತ್ಯ ಅದಕ್ಕೆ ಕೇವಲ ಇಂಗ್ಲೀಷನ್ನು ಮಾತ್ರ ಅರ್ಥ ಮಾಡಿಸುವುದಾಗಿದ್ದು ಮತ್ತು ಅದಕ್ಕೆ ಕೇವಲ ಒಂದು-ಸೊನ್ನೆ (ಬಿಟ್) ಅರ್ಥವಾಗುತ್ತಿದ್ದರಿಂದ ಇಂಗ್ಲೀಷನ್ನು ಬಿಟ್‌ಗೆ ಭಾಷಾಂತರ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಅದಕ್ಕಾಗಿ 7 ಬಿಟ್‌ಗಳನ್ನು ನಿಗದಿ ಮಾಡಲಾಯಿತು. ಆಗಿನ ಕಂಪ್ಯೂಟರಿನ ಶಕ್ತಿ ಎಂಟು ಬಿಟ್‌ಗಳಾಗಿದ್ದು ಎಂಟನೆಯ ಬಿಟ್‌ಅನ್ನು ಎರರ್‌ ಚೆಕಿಂಗಿಗೆ ಎತ್ತಿಡಲಾಗಿತ್ತು. (ಗಮನಿಸಿ: ನಮ್ಮ ಈಗಿನ ಕಂಪ್ಯೂಟರ್ಸ್ 64 ಬಿಟ್‌ ಶಕ್ತಿಶಾಲಿಯಾಗಿವೆ).

ಮನುಷ್ಯನ ಸಂಖ್ಯಾಶಾಸ್ತ್ರದಲ್ಲಿ 0-9 ಅಂದರೆ ಒಟ್ಟು 10 ಸಂಖ್ಯೆಗಳು ಇದಾವೆ. ಇದಕ್ಕಿಂತ ಜಾಸ್ತಿ ಬೇಕಂದರೆ ಎರಡು ಸಂಖ್ಯೆಗಳನ್ನು ಅಕ್ಕಪಕ್ಕ ಜೋಡಿಸಿಬೇಕು. ಹಾಗೆ ಮಾಡಿದಾಗ ನಮಗೆ 00-99 ಅಂದರೆ ಒಟ್ಟು ನೂರು ಸಂಖ್ಯೆಗಳು ಸಿಗುತ್ತವೆ. ಅದೇ ರೀತಿ 7 ಬಿಟ್‌ಗಳನ್ನು ಅಕ್ಕಪಕ್ಕ ಜೋಡಿಸಿದಾಗ ನಮಗೆ 128 ಸಂಖ್ಯೆಗಳು ಅಥವಾ ಕೋಡ್‌ಗಳು ದೊರೆಯುತ...