ಭಾರತ, ಫೆಬ್ರವರಿ 2 -- ಒಂದಾನೊಂದು ಕಾಲದಲ್ಲಿ(1960s) ಕಂಪ್ಯೂಟರ್ ಮೊದಲ ಸಲ ಜಗತ್ತಿಗೆ ಕಾಲಿಟ್ಟಾಗ ಆಗಿನ್ನೂ ಅದು ಎಳಸು ಇದ್ದು ಆಗಿನ ಅಗತ್ಯ ಅದಕ್ಕೆ ಕೇವಲ ಇಂಗ್ಲೀಷನ್ನು ಮಾತ್ರ ಅರ್ಥ ಮಾಡಿಸುವುದಾಗಿದ್ದು ಮತ್ತು ಅದಕ್ಕೆ ಕೇವಲ ಒಂದು-ಸೊನ್ನೆ (ಬಿಟ್) ಅರ್ಥವಾಗುತ್ತಿದ್ದರಿಂದ ಇಂಗ್ಲೀಷನ್ನು ಬಿಟ್ಗೆ ಭಾಷಾಂತರ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಅದಕ್ಕಾಗಿ 7 ಬಿಟ್ಗಳನ್ನು ನಿಗದಿ ಮಾಡಲಾಯಿತು. ಆಗಿನ ಕಂಪ್ಯೂಟರಿನ ಶಕ್ತಿ ಎಂಟು ಬಿಟ್ಗಳಾಗಿದ್ದು ಎಂಟನೆಯ ಬಿಟ್ಅನ್ನು ಎರರ್ ಚೆಕಿಂಗಿಗೆ ಎತ್ತಿಡಲಾಗಿತ್ತು. (ಗಮನಿಸಿ: ನಮ್ಮ ಈಗಿನ ಕಂಪ್ಯೂಟರ್ಸ್ 64 ಬಿಟ್ ಶಕ್ತಿಶಾಲಿಯಾಗಿವೆ).
ಮನುಷ್ಯನ ಸಂಖ್ಯಾಶಾಸ್ತ್ರದಲ್ಲಿ 0-9 ಅಂದರೆ ಒಟ್ಟು 10 ಸಂಖ್ಯೆಗಳು ಇದಾವೆ. ಇದಕ್ಕಿಂತ ಜಾಸ್ತಿ ಬೇಕಂದರೆ ಎರಡು ಸಂಖ್ಯೆಗಳನ್ನು ಅಕ್ಕಪಕ್ಕ ಜೋಡಿಸಿಬೇಕು. ಹಾಗೆ ಮಾಡಿದಾಗ ನಮಗೆ 00-99 ಅಂದರೆ ಒಟ್ಟು ನೂರು ಸಂಖ್ಯೆಗಳು ಸಿಗುತ್ತವೆ. ಅದೇ ರೀತಿ 7 ಬಿಟ್ಗಳನ್ನು ಅಕ್ಕಪಕ್ಕ ಜೋಡಿಸಿದಾಗ ನಮಗೆ 128 ಸಂಖ್ಯೆಗಳು ಅಥವಾ ಕೋಡ್ಗಳು ದೊರೆಯುತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.