ಭಾರತ, ಮಾರ್ಚ್ 8 -- ವಿಶ್ವ ಮಹಿಳಾ ದಿನವನ್ನು ಇಂದು (ಮಾ.8) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೆಣ್ಣನ್ನು ಗೌರವಿಸುವ, ಅವರ ಸಮಾನತೆಗಾಗಿ ಧ್ವನಿಯೆತ್ತುವ ಸಲುವಾಗಿ ಪ್ರತಿ ನಾರಿಯರಿಗಾಗಿ ಒಂದು ದಿನ ನಿಗದಿಪಡಿಸಲಾಗಿದೆ. ಬದುಕಿನ ಪ್ರತಿಹಂತದಲ್ಲೂ ಸವಾಲುಗಳನ್ನು ಮೆಟ್ಟಿ ನಿಂತು, ವಿವಿಧ ಪಾತ್ರಗಳನ್ನು ನಿಭಾಯಿಸುವ ನೀರೆಯ ಬದುಕೇ ಖುಷಿ ಹಾಗೂ ಸವಾಲುಗಳ ಸಮ್ಮಿಶ್ರಣ. ಮದುವೆಗಿಂತ ಮುನ್ನ ಒಂದು ರೀತಿ. ಮದುವೆಯ ಬಳಿಕ ಇನ್ನೊಂದು ರೀತಿ. ಈ ಬಗ್ಗೆ ಡಾ ಭಾಗ್ಯಜ್ಯೋತಿ ಕೋಟಿಮಠ ಅವರು ಆಕರ್ಷಕವಾಗಿ ಬರೆದಿದ್ದಾರೆ. ವಿವಾಹಿತೆಯೊಬ್ಬಳು ತನ್ನ ಗಂಡನನ್ನು 'ರೀ' ಎಂದು ಕರೆಯುವ ಸಂದರ್ಭವನ್ನು ಸೊಗಸಾಗಿ ವರ್ಣಿಸಿದ್ದಾರೆ. ಇಲ್ಲಿ ಕೋಟಿಮಠ ಅವರ ಬರಹವನ್ನು ಯಥಾವತ್ತಾಗಿ ಕೊಡಲಾಗಿದೆ.

ಇವತ್ತು ಮಹಿಳಾ ದಿನ. ಹೌದು ನಮಗೂ ಒಂದು ದಿನ ಅಂತ ಹೇಳಿ ಮಾಡ್ಯಾರ. ಮಹಿಳೆ ಅಂದರೆ ಅವಳಿಗೆ ವಿವಿಧ ರೂಪಗಳಿರುತ್ತವೆ. ಮೊದಲು ಮಗಳಾಗಿ ಪರಿಚಯವಾಗುವ ಅವಳು ಅಕ್ಕನಾಗಿ, ತಂಗಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಚಿಕ್ಕಮ್ಮನಾಗಿ, ಅತ್ತಿಗೆಯಾಗಿ, ದೊಡ್ಡಮ್ಮನಾಗಿ, ಅತ...