Bengaluru, ಫೆಬ್ರವರಿ 28 -- Upcoming OTT Releases In March 2025: ಮಾರ್ಚ್‌ ತಿಂಗಳು ಆರಂಭಕ್ಕೆ ಇನ್ನೊಂದೇ ದಿನ ಬಾಕಿ. ಹೀಗಿರುವಾಗ ಇದೇ ಮಾರ್ಚ್‌ನಲ್ಲಿ ಹೊಸ ಹೊಸ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಹಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಈಗಾಗಲೇ ಸಂಕ್ರಾಂತಿಕಿ ವಸ್ತುನ್ನಾಂ ಸಿನಿಮಾ ಮಾರ್ಚ್‌ 1ರಂದು ಪ್ರಸಾರವಾಗಲಿದೆ. ಇತ್ತೀಚೆಗಷ್ಟೇ ಬಿಡುಗಡೆ ಆದ ತಾಂಡೇಲ್‌ ಸಹ ಒಟಿಟಿಗೆ ಬರುವ ಸಾಧ್ಯತೆಗಳಿವೆ. ಹಾಗಾದರೆ, ಮಾರ್ಚ್‌ನಲ್ಲಿ ನೋಡಬಹುದಾದ ಟಾಪ್‌ 5 ತೆಲುಗು ಸಿನಿಮಾಗಳು ಯಾವುವು, ಅವುಗಳ ವೀಕ್ಷಣೆ ಯಾವಾಗ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ವಿಕ್ಟರಿ ವೆಂಕಟೇಶ್ ಅಭಿನಯದ ಸಂಕ್ರಾಂತಿಕಿ ವಸ್ತುನ್ನಾಂ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಲು ಕ್ಷಣಗಣನೆ ಶುರುವಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ, ಜನವರಿ 14ರಂದು ತೆರೆಗೆ ಬಂದಿದ್ದ ಈ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 300 ಕೋಟಿ ರೂ ಗಳಿಕೆ ಮಾಡಿತ್ತು. ಬ್ಲಾಕ್ ಬಸ್ಟರ್ ಹಿಟ್‌ ಪಟ್ಟ ಪಡೆದ ಈ ...