ಭಾರತ, ಮಾರ್ಚ್ 16 -- ಬೇಸಿಗೆಯಲ್ಲಿ ಕಾಣಿಸುವ ತಲೆನೋವು ಅದರಲ್ಲೂ ವಿಶೇಷವಾಗಿ ಮೈಗ್ರೇನ್ ಅನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಅವು ನಿಮ್ಮ ದೈನಂದಿನ ದಿನಚರಿಯನ್ನು ಹಾಳು ಮಾಡಬಹುದು ಮತ್ತು ಇಡೀ ದಿನ ದಣಿವು, ಆಯಾಸ ಅನುಭವಿಸುವಂತೆ ಮಾಡಬಹುದು. ಬೇಸಿಗೆಯಲ್ಲಿ ಬರುವ ಮೈಗ್ರೇನ್ ಸುಲಭವಾಗಿ ಹೋಗುವುದಿಲ್ಲ. ಬೇಸಿಗೆಯಲ್ಲಿ ದೀರ್ಘಕಾಲದವರೆಗೆ ಮೈಗ್ರೇನ್ ಕಾಡಲು ಕಾರಣವೇನು, ಇದರಿಂದ ಬೇಗ ಚೇತರಿಸಿಕೊಳ್ಳುವುದು ಹೇಗೆ ಎನ್ನುವ ವಿವರ ಇಲ್ಲಿದೆ.

ಬೇಸಿಗೆಯ ದಿನಗಳಲ್ಲಿ ನಿರ್ಜಲೀಕರಣ (ಡಿಹೈಡ್ರೇಶನ್) ಕಾಡುವುದು ಸಹಜ. ನಮ್ಮ ದೇಹದಲ್ಲಿ ಸಾಕಷ್ಟು ನೀರಿನ ಅಂಶ ಇಲ್ಲದಿದ್ದಾಗ, ಅದು ಸರಿಯಾಗಿ ಕೆಲಸ ಮಾಡಲು ಕಷ್ಟಪಡಬಹುದು, ಮತ್ತು ಸಾಮಾನ್ಯವಾಗಿ ಮೈಗ್ರೇನ್ ಇಲ್ಲದಿದ್ದರೂ ಕೂಡ ತಲೆನೋವು ಉಂಟಾಗುತ್ತದೆ. ಡಿಹೈಡ್ರೇಶನ್ ಮೈಗ್ರೇನ್‌ ಅನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಚೇತರಿಕೆಯನ್ನು ನಿಧಾನಗೊಳಿಸುತ್ತದೆ.

ಹೆಚ್ಚು ಹೊತ್ತು ಬಿಸಿಲಿನಲ್ಲಿ ಇರುವುದು ಮೈಗ್ರೇನ್‌ಗೆ ಕಾರಣವಾಗಬಹುದು. ಪ್ರಕಾಶಮಾನವಾದ ಸೂರ್ಯನ ಬೆಳಕು ಮತ್ತು ಶಾಖವು ನರ...