Bengaluru, ಏಪ್ರಿಲ್ 9 -- Mahavir Jayanti 2025: ಜೈನ ಧರ್ಮದ ಇಪ್ಪತ್ತನಾಲ್ಕನೇ ತೀರ್ಥಂಕರರಾದ ಭಗವಾನ್ ಮಹಾವೀರರು ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿದವರು. ಸಹಾನುಭೂತಿಯ ಹೊಸ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ್ದ ಭಗವಾನ್ ಮಹಾವೀರರ ಜಯಂತಿ ಯಾವಾಗ, ದಿನಾಂಕ, ಇತಿಹಾಸ ಹಾಗೂ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.

ಶ್ರಮಣ ಭಗವಾನ್ ಮಹಾವೀರ್ ಸ್ವಾಮೀಜಿ ಅಹಿಂಸೆ, ಪ್ರೀತಿ ಮತ್ತು ತಪಸ್ಸಿನ ಆಗಿದ್ದರು. ಮಹಾವೀರ ಸ್ವಾಮಿಗಳು ಚೈತ್ರ ಮಾಸದ ಶುಕ್ಲಪಕ್ಷದ ತ್ರಯೋದಶಿ ತಿಥಿಯ ದಿನದಂದು ಜನಿಸಿದರು .ಈ ವರ್ಷ ಮಹಾವೀರ ಜಯಂತಿಯನ್ನು ಏಪ್ರಿಲ್ 10 ರಂದು ಆಚರಿಸಲಾಗುತ್ತದೆ . ಮಹಾವೀರ್ ಸ್ವಾಮಿ ಕ್ರಿ.ಪೂ 599 ರಲ್ಲಿ ಬಿಹಾರದ ಲಿಚ್ಚಾವಿ ರಾಜವಂಶದ ಮಹಾರಾಜ್ ಸಿದ್ಧಾರ್ಥ ಮತ್ತು ರಾಣಿ ತ್ರಿಶಾಲಾ ದಂಪತಿಗೆ ಜನಿಸಿದರು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಬಾಲ್ಯದಲ್ಲಿ , ಮಹಾವೀರ ಸ್ವಾಮಿಯ ಹೆಸರು ವರ್ಧಮಾನ್. ಮಹಾವೀರರು ಐದು ತತ್ವಗಳನ್ನು ನೀಡಿದ್ದಾರೆ, ಅದು ಸಮೃದ್ಧ ಜೀವನ ಮತ್ತು ಶಾಂತಿಯ ಮಾರ್ಗವಾಗಿದೆ. ಈ ತತ್ವಗಳೆಂದರೆ ಅಹಿ...