ಭಾರತ, ಫೆಬ್ರವರಿ 22 -- ಮಹಾ ಶಿವರಾತ್ರಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಸಮಯದಲ್ಲಿ ಭಕ್ತಿಭಾವದಿಂದ ಪರಮೇಶ್ವರನನ್ನು ಪೂಜಿಸುವ ಜೊತೆಗೆ ಉಪವಾಸ, ಜಾಗರಣೆಯನ್ನೂ ಮಾಡಲಾಗುತ್ತದೆ. ಶಿವರಾತ್ರಿ ಸಮಯದಲ್ಲಿ ಶಿವನಿಗೆ ಇಷ್ಟವಾಗಿರುವ ಸಕಲವನ್ನೂ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಶಿವ ಮೆಚ್ಚುವ ವಸ್ತುಗಳಲ್ಲಿ ಬಿಲ್ವಪತ್ರೆಯೂ ಒಂದು. ಶಿವರಾತ್ರಿ ಪೂಜೆಗೂ ಬಿಲ್ವಪತ್ರೆ ಬೇಕು.

ಹಾಗಾದರೆ ಶಿವನಿಗೂ ಬಿಲ್ವಪತ್ರೆಗೂ ಇರುವ ಸಂಬಂಧವೇನು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವಾಗ ಪಾಲಿಸಬೇಕಾದ ನಿಯಮಗಳೇನು, ಈ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: Maha Shivaratri 2025: ಶಿವಲಿಂಗದ ಪೂಜೆ ಯಾವಾಗ ಆರಂಭವಾಯಿತು? ಶಿವನಿಗೆ ನೀಲಕಂಠ ಎನ್ನುವುದೇಕೆ? ಇಲ್ಲಿದೆ ಪರಮೇಶ್ವರನ ಹಲವು ಕಥೆಗಳು

ಶಿವನು ಸಮುದ್ರ ಮಥನದ ವಿಷವನ್ನು ಸೇವಿಸಿದಾಗ, ಅವನ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ. ದೇಹದ ಉಷ್ಣತೆಯ ಹೆಚ್ಚಳದಿಂದಾಗಿ ವಿಶ್ವವು ಬೆಂಕಿಯ ತಾಪದಲ್ಲಿ ಮುಳುಗಿತು. ಈ ಶಾಖ...