Dubai, ಮಾರ್ಚ್ 6 -- Explainer: ಚಿನ್ನ ಎಂದರೆ ಇಷ್ಟಪಡದವರು ಯಾರಿದ್ದಾರೆ. ಅದರಲ್ಲೂ ಭಾರತೀಯರಿಗೆ ಮಾತ್ರ ಚಿನ್ನದ ಬಗ್ಗೆ ಇನ್ನಿಲ್ಲದ ಅಭಿಮಾನ. ಚಿನ್ನವನ್ನು ಆಭರಣ ರೂಪದಲ್ಲಿ ಧರಿಸುವವರು ಇದ್ದಾರೆ. ಇನ್ನು ಕೆಲವರು ಹೂಡಿಕೆಗೆ ಚಿನ್ನದ ಮಾರ್ಗವನ್ನು ಕಂಡುಕೊಳ್ಳುವವರು ಇದ್ದಾರೆ. ಏಕೆಂದರೆ ದರದ ವಿಚಾರ ಬಂದಾಗ ಹೆಚ್ಚಿನ ಜನರ ಹೂಡಿಕೆ ಆಯ್ಕೆ ಭೂಮಿ ಇಲ್ಲವೇ ಚಿನ್ನವೇ. ಈ ಎರಡೂ ಕಾರಣದಿಂದ ಚಿನ್ನದ ವಹಿವಾಟು ಇನ್ನಿಲ್ಲದಂತೆ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಚಿನ್ನದ ಖರೀದಿ, ಆಮದು ಪ್ರಮಾಣ ಹೆಚ್ಚುತ್ತಲೇ ಇದೆ. ಖರೀದಿ ಪ್ರಮಾಣ ಹೆಚ್ಚಿದಂತೆ ಬೇಡಿಕೆ ಹೆಚ್ಚಿ ದರದಲ್ಲೂ ಗಣನೀಯ ಏರಿಕೆಯಂತೂ ಕಾಣುತ್ತಿದೆ. ದುಬೈನಿಂದ ಚಿನ್ನವನ್ನು ಹಲವಾರು ಕಾರಣಗಳಿಂದ ತರುವವರೇ ಅಧಿಕ. ಈಗಲೂ ದುಬೈನಿಂದಲೇ ಕನ್ನಡದ ನಟಿಯೊಬ್ಬರು ಚಿನ್ನ ತಂದು ಸಿಕ್ಕಿ ಹಾಕಿಕೊಂಡಿದ್ದಾರೆ.

ಭಾರತೀಯ ಆರ್ಥಿಕ ಕ್ಷೇತ್ರದಲ್ಲಿ ಚಿನ್ನ ಕೇವಲ ಅಮೂಲ್ಯ ಲೋಹಮಾತ್ರವಷ್ಟೇ ಅಲ್ಲ ಅದಕ್ಕಿಂತ ಹೆಚ್ಚಿನದ್ದು. ಇದು ಒಂದು ಕಡೆ ಸಮೃದ್ಧಿ, ಸಂ...