ಭಾರತ, ಮಾರ್ಚ್ 2 -- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಎಂದರೆ ಕಣ್ಣಿಗೆ ಸವಾಲು ಹಾಕುವಂತೆಯೇ ಇರುತ್ತವೆ. ಸಾಕಷ್ಟು ಟ್ರಿಕ್ಕಿ ಇರುವ ಈ ಚಿತ್ರಗಳು ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದರಲ್ಲಿರುವ ಸವಾಲು ಭೇದಿಸಲು ಕಣ್ಣು, ಮೆದುಳಿಗೆ ಸಾಕಷ್ಟು ಕೆಲಸ ಕೊಡಬೇಕಾಗುತ್ತದೆ. ಆದರೂ ಇವು ಒಂಥರಾ ಮಜಾ ನೀಡುವುದು ಸುಳ್ಳಲ್ಲ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇಂತಹ ಚಿತ್ರಗಳು ವೈರಲ್ ಆಗುತ್ತವೆ.

ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಬೆಕ್ಕು ಹುಡುಕುವ ಸವಾಲು ಇದೆ. ಈ ಚಿತ್ರದಲ್ಲಿ ಬ್ರೆಡ್ ಹಾಗೂ ಬನ್‌ಗಳನ್ನು ಒಂದೆಡೆ ರಾಶಿ ಹಾಕಲಾಗಿದೆ. ನೀಲಿ ಬಣ್ಣದ ಹೊದಿಕೆಯ ಮೇಲೆ ಬೆಡ್ ರಾಶಿಯನ್ನು ನೀವು ಗಮನಿಸಬಹುದು. ಆದರೆ ಈ ರಾಶಿಯ ನಡುವೆ ಒಂದು ಕಳ್ಳ ಬೆಕ್ಕು ಅವಿತು ಕುಳಿತಿದೆ. ಆ ಬೆಕ್ಕು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಇದು ಕೇವಲ 10 ಸೆಕೆಂಡ್ ಒಳಗೆ. ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಇದ್ದರೆ ನೀವು 10 ಸೆಕೆಂಡ್‌ ಒಳಗೆ ಬೆಕ್ಕು ಎಲ್ಲಿದೆ ಎಂದು ಕಂಡುಹಿಡಿಯಬಹುದು.

ಇಂತಹ ಆಪ್ಟಿಕಲ್ ಇಲ್ಯ...