ಭಾರತ, ಏಪ್ರಿಲ್ 28 -- ಬ್ರೈನ್‌ ಟೀಸರ್‌ಗಳನ್ನು ಬಿಡಿಸುವುದು ಮನಸ್ಸಿಗೆ ಸಖತ್‌ ಮಜಾ ನೀಡುತ್ತದೆ. ಇವು ನಮ್ಮ ಮೆದುಳಿನ ಸಾಮರ್ಥ್ಯವನ್ನು ಪರೀಕ್ಷೆ ಮಾಡುವುದು ಮಾತ್ರವಲ್ಲ, ಅರಿವಿನ ಸಾಮರ್ಥ್ಯವನ್ನೂ ತಿಳಿಯುವಂತೆ ಮಾಡುತ್ತವೆ. ನಿಮಗೆ ಬ್ರೈನ್‌ ಟೀಸರ್‌ ಬಿಡಿಸುವುದು ಇಷ್ಟ ಎಂದಾದರೆ ನಿಮಗಾಗಿ ನಾವು ಪ್ರತಿದಿನ ಹೊಸ ಹೊಸ ಬ್ರೈನ್‌ ಟೀಸರ್‌ಗಳನ್ನು ತರುತ್ತೇವೆ. ಇದಕ್ಕೆ ನೀವು ಉತ್ತರ ಕಂಡುಕೊಳ್ಳುವುದು ಮಾತ್ರವಲ್ಲ, ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಂಡು ಅವರ ಜಾಣ್ಮೆಯನ್ನೂ ಪರೀಕ್ಷೆ ಮಾಡಬಹುದು. ಹಾಗಾದ್ರೆ ಇನ್ಯಾಕೆ ತಡ, ಇಲ್ಲೊಂದು ಬ್ರೈನ್‌ ಟೀಸರ್‌ ಇದೆ, ಉಷಾಳ ಮಗ ಎಷ್ಟು ಪುಟಗಳನ್ನು ಹರಿದಿದ್ದಾನೆ ಎಂದು ನೀವು ಥಟ್ಟಂತ ಉತ್ತರ ಹೇಳಬೇಕು.

ʼನಿಮ್ಮಿಂದ ಇದನ್ನು ಬಿಡಿಸಲು ಸಾಧ್ಯವೇ?ʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್‌ ಟೀಸರ್‌ ಅನ್ನು ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿರುವ ಚಿತ್ರದಲ್ಲಿ ಪ್ರಶ್ನೆ ಹೀಗಿದೆ ʼಉಷಾಳ ಮಗ ಪುಸ್ತಕದೊಂದಿಗೆ ಆಟವಾಡುತ್ತಿರುತ್ತಾನೆ. ಅವನು 7,8...