ಭಾರತ, ಮಾರ್ಚ್ 31 -- OTT Movies and web series this week: ಏಪ್ರಿಲ್‌ ತಿಂಗಳ ಮೊದಲ ವಾರವೆಂದರೆ ಸಾಕಷ್ಟು ಜನರು ಒಂದಿಷ್ಟು ಬಿಡುವಿನಲ್ಲಿ ಇರುತ್ತಾರೆ. ಮಕ್ಕಳ ರಜೆ, ಬಿಸಿಲು ಸೆಖೆ ಸೇರಿದಂತೆ ಅನೇಕ ಕಾರಣಗಳಿಂದ ಏಪ್ರಿಲ್‌ ತಿಂಗಳಲ್ಲಿ ಸಾಕಷ್ಟು ಜನರು ಮನೆಯಲ್ಲಿಯೇ ಕುಳಿತು ಸಿನಿಮಾಗಳನ್ನು ನೋಡಲು ಬಯಸಬಹುದು. ಮಾರ್ಚ್‌ನಲ್ಲಿ, ಸಂಕ್ರಾಂತಿ, ತಂಡೇಲ್, ರೇಖಾಚಿತ್ರಂ, ಆಫೀಸರ್ ಆನ್ ಡ್ಯೂಟಿ, ಪೊನ್ಮ್ಯಾನ್ ಸೇರಿದಂತೆ ಹಲವು ಚಲನಚಿತ್ರಗಳು ಮತ್ತು ಕೆಲವು ವೆಬ್ ಸರಣಿಗಳು ಒಟಿಟಿಗಳಲ್ಲಿ ಬಿಡುಗಡೆಯಾಗಿವೆ. ಈಗ ಏಪ್ರಿಲ್‌ನ ಮೊದಲ ವಾರದಲ್ಲಿಯೂ ವಿವಿಧ ಒಟಿಟಿಗಳಲ್ಲಿ ಹೊಸ ಸಿನಿಮಾಗಳು, ವೆಬ್‌ ಸರಣಿಗಳು ಬಿಡುಗಡೆಯಾಗಲು ಸರದಿಯಲ್ಲಿವೆ. ಮಲ್ಟಿಸ್ಟಾರ್ ಚಿತ್ರವಾದ ಟೆಸ್ಟ್ ನೇರವಾಗಿ ಸ್ಟ್ರೀಮಿಂಗ್‌ಗೆ ಬರುತ್ತಿದೆ. ಇನ್ನೊಂದು ಆಸಕ್ತಿಕರ ತಮಿಳು ಚಿತ್ರದ ಜೊತೆಗೆ ಎರಡು ತೆಲುಗು ವೆಬ್ ಸರಣಿಗಳು ಸ್ಟ್ರೀಮಿಂಗ್‌ಗೆ ಬರಲಿವೆ. ಏಪ್ರಿಲ್‌ನ ಮೊದಲ ವಾರದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಟಾಪ್‌ 5 ಸಿನಿಮಾ/ವೆಬ್‌ ಸರಣಿಗಳು ಯಾವುವು ಎ...