Bangalore, ಫೆಬ್ರವರಿ 13 -- Amruthadhaare Kannada Serial today (Feb 13): ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಬರುವ ವೇಳೆಗೆ ಶಕುಂತಲಾದೇವಿ ವಿಲ್‌ ಅನ್ನು ಅಡಗಿಸಿಡುತ್ತಾರೆ. ಗೌತಮ್‌ ಬಂದಾಗ ವಿಲ್‌ ಇಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ತನ್ನ ಮಲತಾಯಿ ಎಂದು ನೋಡದೆ ಕೋಪದಿಂದ ಗೌತಮ್‌ ಬಯ್ಯುತ್ತಾನೆ. "ನಿಮ್ಮಲ್ಲಿ ಸೇಫ್‌ ಆಗಿ ಇರುತ್ತದೆ ಎಂದು ನಾನು ವಿಲ್‌ ಇಟ್ಟಿದ್ದೇನೆ ಅಲ್ವಾ. ಅದನ್ನು ಕಳೆದುಕೊಂಡಿದ್ದೀರಿ. ಸ್ವಲ್ಪನೂ ಜವಾಬ್ದಾರಿ ಬೇಡ್ವ ಅಮ್ಮಾ" ಎಂದು ಅಬ್ಬರಿಸುತ್ತಾನೆ. ಶಕುಂತಲಾದೇವಿ ಮತ್ತು ಲಕ್ಷ್ಮಿಕಾಂತ್‌ ನಾಟಕ ಮುಂದುವರೆಸುತ್ತಾರೆ. ಶಕುಂತಲಾದೇವಿ ಎದೆ ನೋವಾದಂತೆ ನಾಟಕವಾಡುತ್ತಾಳೆ. "ಸಮಾಧಾನ ಮಾಡಿಕೊಳ್ಳಿ" ಎಂದು ಹೇಳಿ ಗೌತಮ್‌ ಅಲ್ಲಿಂದ ಹೋಗುತ್ತಾನೆ.

ಮಹಿಮಾ ಭೂಮಿಕಾಗೆ ಕಾಲ್‌ ಮಾಡುತ್ತಾಳೆ. ಅಣ್ಣ ನನ್ನ ಕಾಲ್‌ ತೆಗೆದಿಲ್ಲ ಎನ್ನುತ್ತಾಳೆ. ಆಫೀಸ್‌ ವಿಷಯದಲ್ಲಿ ಟೆನ್ಷನ್‌ನಲ್ಲಿದ್ದಾರೆ ಎಂದು ಭೂಮಿಕಾ ಹೇಳಿದಾಗ ಏನು ವಿಷ್ಯ ಎಂದು ಕೇಳುತ್ತಾಳೆ. ಭೂಮಿಕಾ ಎಲ್ಲಾ ಹೇಳುತ್ತಾಳೆ. ಇದರ ಹಿಂದೆ ಇರು...