ಭಾರತ, ಜುಲೈ 17 -- ಗದಾಧಾರಿ ಹನುಮಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೊದಲ ನೋಟದಲ್ಲೇ ಈ ಚಿತ್ರ ಫ್ಯಾಂಟಸಿ ಸಿನಿಮಾದಂತೆ ಕಂಡಿದೆ. ದುಬಾರಿ ವೆಚ್ಚದ ಗ್ರಾಫಿಕ್ಸ್ ವಿಎಫ್ ಎಕ್ಸ್ ಹಾಗೂ ಸೌಂಡ್ ಎಫೆಕ್ಟ್ಸ್ ಮೇಕಿಂಗ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದು, ತಂತ್ರಜ್ಞಾನದ ನೈಪುಣ್ಯದ ಜೊತೆ ಕಂಡಿರೋ ತಾರಾಬಳಗ ಈ ಚಿತ್ರದ ಮೇಲೆ ಭರವಸೆ ಹುಟ್ಟಿಸಿದೆ.

ವಿರಾಬ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಸವರಾಜ್ ಹುರಕಡ್ಲಿ ಮತ್ತು ರೇಣುಕ ಪ್ರಸಾದ್. ಕೆ. ಆರ್ ಜೊತೆಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ರೋಹಿತ್ ಕೊಲ್ಲಿ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಗದಾಧಾರಿ ಹನುಮಾನ್ ಸಾಹಸಮಯ, ಹಾರರ್ ಥ್ರಿಲ್ಲರ್, ದೈವತ್ವ ಹಾಗೂ ರಾಕ್ಷಸತ್ವದ ಕಥಾಹಂದರವಿರೋ‌ ಚಿತ್ರ.

ತಾರಕಾಸುರ ಖ್ಯಾತಿಯ ಕಿರಣ್ ( ವೈಭವ್) ಈ ಚಿತ್ರದ ನಾಯಕ. ಹೊಸ ಪ್ರತಿಭೆ ಹರ್ಷಿತಾ ನಾಯಕಿ. ಇವರೊಟ್ಟಿಗೆ ಕಲ್ಯಾಣ್ ಕೃಷ್ಣ, ರಮೇಶ್ ಪಂಡಿತ್, ಸುನಂದ ಕಲ್ಬುರ್ಗಿ, ನಾಗೇಶ್ ಮಯ್ಯ, ಶಿವಪ್ಪ, ಅರ್ಜುನ್, ಭೀಷ್ಮ, ಲೋಕೇಶ್ ನಟಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸ...