ಭಾರತ, ಮೇ 18 -- ಇತ್ತೀಚಿನ ದಿನಗಳಲ್ಲಿ ಯುವಜನರಿಗೆ ದೇಹದ ಕೊಬ್ಬು ಕರಗಿಸಿ, ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವುದು ನಿಜಕ್ಕೂ ಸವಾಲಾಗಿದೆ. ಹಲವರು ತೂಕ ಏರಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಹಲವರು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಡಯೆಟ್‌ ಹೆಸರಿನಲ್ಲಿ ಬಾಯಿಗೆ ರುಚಿ ಎನ್ನಿಸುವ ಯಾವುದನ್ನೂ ತಿನ್ನದೇ ಕಷ್ಟಪಟ್ಟು ಆಹಾರ ನಿಯಂತ್ರಣ ಮಾಡುತ್ತಿದ್ದಾರೆ.

ಕೆಲವರು ತೂಕ ಇಳಿಸಿಕೊಳ್ಳುವ ಸಲುವಾಗಿ ಔಷಧಿಗಳನ್ನು ಸೇವಿಸುತ್ತಾರೆ. ಆದರೆ ಇದರಿಂದ ಅಡ್ಡಪರಿಣಾಮಗಳು ಜಾಸ್ತಿ. ಕೆಲವೊಮ್ಮೆ ತೂಕ ಇಳಿಕೆಯ ಔಷಧಿಗಳು ಪ್ರಾಣಕ್ಕೆ ಸಂಚು ತರುವ ಅಪಾಯವೂ ಇದೆ. ಈ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ ಜೊತೆ ಮಾತನಾಡಿರುವ ಡಾ. ಜೈಸನ್ ಪಾಲ್ ಶರ್ಮಾ, ʼತೂಕ ಇಳಿಕೆಯ ಔಷಧಿಗಳು ದುಬಾರಿಯಾಗಿವೆ. ಇವು ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಅಲ್ಲದೇ ದೀರ್ಘಾವಧಿಯ ಬಳಕೆಗೆ ಸಮರ್ಥನೀಯವಲ್ಲ. ಸಾಕಷ್ಟು ಪೋಷಣೆಯಿಲ್ಲದೆ ತ್ವರಿತ ತೂಕ ನಷ್ಟವು ಸ್ನಾಯುವಿನ ದ್ರವ್ಯರಾಶಿಯಲ್ಲಿ ಇಳಿಕೆಗೆ ಕಾರಣವಾಗಬಹುದ...