ಭಾರತ, ಮೇ 14 -- ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮುಗ್ಧತೆ, ನಿಷ್ಕಪಟ ಮನೋಭಾವ ಸಂಪೂರ್ಣವಾಗಿ ಮರೆಯಾಗುತ್ತಿದೆ. 10, 12 ವಯಸ್ಸಿನ ಮಕ್ಕಳು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಇಂದಿನ ಮಕ್ಕಳಲ್ಲಿ ತಪ್ಪು ಮಾಡಿದ್ದೇವೆ ಎನ್ನುವ ಅಪರಾಧಿ ಭಾವ ಎಂದಿಗೂ ಮೂಡುವುದಿಲ್ಲ. ಮಕ್ಕಳಲ್ಲಿನ ಮುಗ್ಧತೆ ಸಂಪೂರ್ಣ ಮರೆಯಾಗಲು ಕಾರಣವೇನು, ಈ ವಿಚಾರದಲ್ಲಿ ಪೋಷಕರು ಹಾಗೂ ಸಮಾಜ ಏನು ಮಾಡಬಹುದು ಎಂಬ ಬಗ್ಗೆ ವಿಸ್ತಾರವಾಗಿ ತಮ್ಮ ಫೇಸ್‌ಬುಕ್‌ ಬರಹದಲ್ಲಿ ಬರೆದುಕೊಂಡಿದ್ದಾರೆ ಮನಶಾಸ್ತ್ರಜ್ಞೆ ಡಾ ರೂಪಾ ರಾವ್‌. ಅವರ ಬರಹವನ್ನು ನೀವೂ ಓದಿ.

ನಿನ್ನೆ ಹುಬ್ಬಳಿಯ 12 ವರ್ಷದ ಬಾಲಕನೊಬ್ಬ ತನ್ನ ಹದಿಹರೆಯದ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಂದ ಎಂಬ ಸುದ್ದಿ ಓದಿದೆ. ಅವರಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಹಂಚಿಕೊಂಡಿದ್ದ ಚಿಕ್ಕ ಹುಡುಗರು. ಓದಿ ಶಾಕ್ ಏನೂ ಆಗಲಿಲ್ಲ.

ಏಕೆಂದರೆ ಇದೊಂದೆ ಅಲ್ಲ. ಪಟಿಯಾಲಾದಿಂದ ಬಂಗಾಳದವರೆಗೆ, ಮಧ್ಯ ಪ್ರದೇಶದಿಂದ ಉತ್ತರ ಪ್ರದೇಶದವರೆಗೆ- ಹದಿಹರೆಯದವರು ಐಫೋನ್‌ಗಳು, ಪಾಸ್ವರ್ಡ್‌ಗಳು, ವಿಡಿಯೊ ತುಣುಕುಗಳು...