ಭಾರತ, ಫೆಬ್ರವರಿ 11 -- ಮಂಗಳೂರು: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಕೆಲ ಸುದ್ದಿ ಮಾಧ್ಯಮಗಳು ಬಿತ್ತರಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಪ್ರೇತಬಾಧೆ ಪ್ರಕರಣವೀಗ ತಣ್ಣಗಾಗಿದೆ. ವಿಚಿತ್ರ ಘಟನೆಗಳಿಂದ ಸುದ್ದಿಯಾಗಿದ್ದ ಮಾಲಾಡಿ ಗ್ರಾಮದ ಕೊಲ್ಪೆದ ಬೈಲು ಉಮೇಶ್ ಶೆಟ್ಟಿ ಅವರ ಮನೆಯ ಎಲ್ಲಾ ಸಮಸ್ಯೆಗಳು ಪರಿಹಾರಗೊಂಡಿವೆ ಎಂದು ಮನೆ ಮಂದಿ ತಿಳಿಸಿದ್ದಾರೆ. ಸಮಸ್ಯೆ ಕಂಡು ಬಂದ ಬಳಿಕ ಮನೆ ತೊರೆದಿದ್ದ ಕುಟುಂಬ ಮತ್ತೆ ಮನೆಗೆ ವಾಪಸಾಗಿದೆ.

ಕತ್ತಲಾಗುತ್ತಿದ್ದಂತೆ ಬಟ್ಟೆಗಳಿಗೆ ಬೆಂಕಿ ಹಿಡಿಯುವುದು, ಪಾತ್ರೆ- ಪಗಡೆ ಬೀಳುವುದು, ಯಾರೋ ಚಲಿಸಿದಂತಾಗುವುದು ಹೀಗೆ ಹಲವು ರೀತಿಯ ವಿಚಿತ್ರ ಘಟನೆ ನಡೆಯುತ್ತಿರುವುದಾಗಿ ಮನೆ ಮಂದಿ ಹೇಳಿದ್ದರು. ಆದರೆ ಈಗ ಅವೆಲ್ಲ ನಿವಾರಣೆಯಾಗಿದೆ. ಇದಕ್ಕೆ ಪರಿಹಾರ ಮಾಡಿಕೊಳ್ಳಲಾದ ಬಳಿಕ ಯಾವುದೇ ಸಮಸ್ಯೆ ಇಲ್ಲ ಎಲ್ಲವೂ ಸರಿಯಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.

ಬೀಗ ಹಾಕಿದ್ದ ಕಪಾಟಿನಲ್ಲಿದ್ದ ಚಿನ್ನವು ನಾಪತ್ತೆಯಾಗಿತ್ತೆಂದು ಮನೆಯವರು ಹೇಳಿ...