Bengaluru,ಬೆಂಗಳೂರು, ಮಾರ್ಚ್ 11 -- Appu Picture Postcards: ಕನ್ನಡ ಚಿತ್ರರಂಗದ ಜನಪ್ರಿಯ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ 50ನೇ ಜಯಂತಿ ಮಾರ್ಚ್ 17ಕ್ಕೆ ನಡೆಯಲಿದೆ. ತನ್ನಿಮಿತ್ತವಾಗಿ ಭಾರತೀಯ ಅಂಚೆಯ ಕರ್ನಾಟಕ ವೃತ್ತದ ಮುಖ್ಯ ಕಚೇರಿಯಲ್ಲಿ ಸೋಮವಾರ ಅವರ ಸ್ಮರಣಾರ್ಥ ವಿಶೇಷ 5 ಪಿಕ್ಚರ್‌ ಪೋಸ್ಟ್‌ ಕಾರ್ಡ್‌ಗಳು ಹಾಗೂ ಒಂದು ಅಂಚೆ ಕವರ್ ಬಿಡುಗಡೆಯಾಗಿದೆ. ಅವುಗಳ ಸಚಿತ್ರ ನೋಟ ಹಾಗೂ ಅವು ಯಾವ ಅಂಚೆ ಕಚೇರಿಯಲ್ಲಿ ಸಿಗುತ್ತವೆ ಎಂಬ ವಿವರ ಇಲ್ಲಿದೆ.

ಅಭಿಮಾನಿಗಳ ದೇವರು: ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅವರನ್ನು ಅಭಿಮಾನಿಗಳ ದೇವರು ಎಂದೇ ಕರೆದಿದ್ದಾರೆ. ಅದನ್ನು ನೆನಪಿಸುವಂತೆ ಅಭಿಮಾನಿಗಳ ದೇವರು ಎಂದು ನಮೂದಾಗಿರುವ ಈ ಪಿಕ್ಚರ್ ಪೋಸ್ಟ್‌ಕಾರ್ಡ್‌ ಹಿಂಭಾಗದಲ್ಲಿ ಇದಕ್ಕೆ ಸಂಬಂಧಪಟ್ಟ ವಿವರಣೆಯೂ ಇದೆ.

ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್‌: ನಿರ್ಭೀತ ನಡೆ, ನುಡಿಗಳನ್ನು ಬಿಂಬಿಸುವ ಪಿಕ್ಚರ್ ಕಾರ್ಡ್ ಇದಾಗಿದ್ದು, ಅಪ್ಪು ಅಭಿಮಾನಿಗಳಿಗೆ ಇಷ್ಟವಾಗುವುದು ಖಚಿತ.

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್...