ಭಾರತ, ಮೇ 8 -- ಇನ್​ಸ್ಟಾಗ್ರಾಂನಲ್ಲಿ ನಟಿ ಅವನೀತ್​ಕೌರ್​ಗೆ ಆಕಸ್ಮಿಕವಾಗಿ ಒತ್ತಿದ ಲೈಕ್​ನಿಂದ ವಿರಾಟ್ ಕೊಹ್ಲಿ ಅವರ ಕುಟುಂಬ ಹೊತ್ತಿ ಉರಿಯುತಿದ್ಯಾ? ಹೀಗೊಂದು ಪ್ರಶ್ನೆ ಉದ್ಭವಿಸಲು ವೈರಲ್ ಆಗುತ್ತಿರುವ ವಿಡಿಯೋವೇ ಕಾರಣ. ಇಬ್ಬರ ನಡುವೆ ಮುನಿಸು ಏರ್ಪಟ್ಟಿದ್ಯಾ ಎನ್ನುವುದಕ್ಕೆ ಇದು ಮತ್ತಷ್ಟು ಪುಷ್ಠಿ ನೀಡುತ್ತಿದೆ ಎಂಬುದು ಗಮನಾರ್ಹ. ಇತ್ತೀಚೆಗೆ ಕೊಹ್ಲಿ ನಟಿ ಅವನೀತ್​ಕೌರ್ ಫೋಟೋಗೆ ಲೈಕ್ ಕೊಟ್ಟಿದ್ದು, ದೊಟ್ಟಮಟ್ಟದ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ವಿರಾಟ್ ಇನ್​ಸ್ಟಾ ಸ್ಟೋರಿಯಲ್ಲಿ ಸ್ಪಷ್ಟನೆಯೂ ಕೊಟ್ಟಿದ್ದರು. ಉದ್ದೇಶಪೂರ್ವಕವಾಗಿ ಲೈಕ್ ಕೊಟ್ಟಿಲ್ಲ. ಇನ್​ಸ್ಟಾಗ್ರಾಂ ತಾಂತ್ರಿಕ ಎಡವಟ್ಟಿನಿಂದ ಇದು ಸಂಭವಿಸಿದೆ. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಪೋಸ್ಟ್​​ನಲ್ಲಿ ಕ್ರಿಕೆಟಿಗ ಸ್ಪಷ್ಟನೆಯನ್ನು ಕೊಟ್ಟಿದ್ದರು.

ಆದರೆ, ಈ ಘಟನೆಯ ನಂತರ ವಿರಾಟ್-ಅನುಷ್ಕಾ ದಂಪತಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ರೆಸ್ಟೋರೆಂಟ್‌ವೊಂದಕ್ಕೆ ಊಟಕ್ಕೆ ಬಂದಿದ್ದರು. ಈ...