Hyderabad, ಏಪ್ರಿಲ್ 24 -- ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಹಲವು ನಟಿಯರು ರಿಯಲ್‌ ಲೈಫ್‌ನಲ್ಲಿ ಗಂಡ ಹೆಂಡತಿಯಾಗಿರಬಹುದು. ಆದರೆ, ಸಿನಿಮಾ ಅಥವಾ ಸೀರಿಯಲ್‌ಗಳಲ್ಲಿ ಬೇರೆ ಸಂಬಂಧಗಳ ಪಾತ್ರದಲ್ಲಿ ನಟಿಸಿರಬಹುದು. ಚಿತ್ರರಂಗದಲ್ಲಿ ಇದೆಲ್ಲವೂ ತುಂಬಾ ಸಾಮಾನ್ಯ. ಆದರೆ, ತಾಯಿ ಮತ್ತು ಮಗನಂತೆ ನಟಿಸಿದವರು ನಿಜವಾಗಿಯೂ ಗಂಡ ಮತ್ತು ಹೆಂಡತಿಯಾದರು ಎನ್ನುವ ಸುದ್ದಿ ಕೇಳಿದ್ರೆ ಸಾಕಷ್ಟು ಜನರಿಗೆ ಅಚ್ಚರಿಯಾಗಬಹುದು. ಧಾರಾವಾಹಿಯಲ್ಲಿ ತಾಯಿ ಮಗನಾಗಿ ನಟಿಸಿದ್ದ ಇಬ್ಬರು ನಿಜ ಜೀವನದಲ್ಲಿ ಗಂಡ ಹೆಂಡತಿಯಾದರು. ಅವರು ಕಿಶ್ವರ್ ಮರ್ಚೆಂಟ್ (44) ಮತ್ತು ಸುಯಾಶ್ ರಾಯ್ (36). ಇವರಿಬ್ಬರು ಹಿಂದಿ ಟಿವಿ ನಟರು ಮತ್ತು ರೂಪದರ್ಶಿಗಳು.

ಕಿಶ್ವರ್ ಮರ್ಚೆಂಟ್ ಸುಯಶ್ ರಾಯ್ ಅವರಿಗಿಂತ 8 ವರ್ಷ ದೊಡ್ಡವರು. ಆದರೆ, ಅನೇಕ ಸವಾಲುಗಳನ್ನು ಎದುರಿಸಿದರೂ, ಕಿಶ್ವರ್ ಮತ್ತು ಸುಯಾಶ್ ರಾಯ್ ನಿಜ ಜೀವನದಲ್ಲಿ ದಂಪತಿಗಳಾದರು. ಪ್ರೀತಿಗೆ ಯಾವುದೇ ಅಡ್ಡಿಯಲ್ಲ ಎಂದು ಸಾಬೀತುಪಡಿಸಿದರು. ಅವರಿಗೆ ನಿರ್ವೈರ್ ಎಂಬ ಮಗನೂ ಇದ್ದ...