Bengaluru, ಮೇ 17 -- ಟಾಲಿವುಡ್‌ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅದರಲ್ಲಿಯೂ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದ ಸಿನಿಮಾ ಎಂದರೆ ಅದು ಪ್ರಶಾಂತ್‌ ನೀಲ್‌ ಜತೆಗಿನ ಚಿತ್ರ. ʻಕೆಜಿಎಫ್‌ʼ, ʻಸಲಾರ್‌ʼ ಸಿನಿಮಾ ಬಳಿಕ ಜೂನಿಯರ್‌ ಎನ್‌ಟಿಆರ್‌ ಜೊತೆಗೆ ಕೈ ಜೋಡಿಸಿರುವ ನೀಲ್‌, ಈಗಾಗಲೇ ಈ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಒಂದಷ್ಟು ಭಾಗದ ಶೂಟಿಂಗ್‌ ಸಹ ಮುಗಿಸಿದ್ದಾರೆ. ಇದೀಗ ಇದೇ ಸಿನಿಮಾತಂಡದ ಒಂದು ನಿರ್ಧಾರ ಎನ್‌ಟಿಆರ್‌ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಏನಾಗಿದೆ? ಇಲ್ಲಿದೆ ಮಾಹಿತಿ.

ಮೇ 20ರಂದು ಜೂನಿಯರ್‌ ಎನ್‌ಟಿಆರ್‌ ಬರ್ತ್‌ಡೇ ಆ ನಿಮಿತ್ತ ಪ್ರಶಾಂತ್‌ ನೀಲ್‌ ನಿರ್ದೇಶನದ ಸಿನಿಮಾದಿಂದ ಬಿಗ್‌ ಸರ್ಪ್ರೈಸ್‌ ಸಿಗಬಹುದು ಎಂದು ಅಭಿಮಾನಿಗಳು ಕಾದಿದ್ದರು. ಆದರೆ, ʻವಾರ್‌ 2ʼ ಸಿನಿಮಾದಿಂದ ಅಪ್‌ಡೇಟ್‌ ಬರುತ್ತಿರುವ ಹಿನ್ನೆಲೆಯಲ್ಲಿ, ನಮ್ಮ ಸಿನಿಮಾದ ಗ್ಲಿಂಪ್ಸ್‌ ಮುಂದೂಡುತ್ತಿದ್ದೇವೆ ಎಂದು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ ...