ಭಾರತ, ಜೂನ್ 3 -- ಪಂಜಾಬ್ ಕಿಂಗ್ಸ್ ವಿರುದ್ಧದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ ಫೈನಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಐಪಿಎಲ್​ ಫೈನಲ್​ನಲ್ಲಿ ತಾನು ಬಾರಿಸಿದ ಮೊದಲ ಬೌಂಡರಿಯೊಂದಿಗೆ ಕೊಹ್ಲಿ, ಶಿಖರ್​ ಧವನ್ ದಾಖಲೆ ಮುರಿದಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಕೊಹ್ಲಿ 267 ಐಪಿಎಲ್ ಪಂದ್ಯಗಳ 259 ಇನ್ನಿಂಗ್ಸ್​​ಗಳಲ್ಲಿ 769 ಬೌಂಡರಿ ಸಿಡಿಸಿ ಧವನ್​ರನ್ನು ಹಿಂದಿಕ್ಕಿದ್ದಾರೆ. ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದ ಧವನ್ 222 ಪಂದ್ಯಗಳಲ್ಲಿ 768 ಬೌಂಡರಿ ಸಿಡಿಸಿದ್ದಾರೆ.

ಇದು ವಿಶ್ವದಾಖಲೆಯೂ ಹೌದು. ಟಿ20 ಲೀಗ್ ಕ್ರಿಕೆಟ್​​ನಲ್ಲಿ ಫ್ರಾಂಚೈಸಿಯೊಂದರ ಅತಿ ಹೆಚ್ಚು ಬೌಂಡರಿ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

ಕೊಹ್ಲಿ ಮತ್ತು ಧವನ್ ನಂತರ ಡೇವಿಡ್ ವಾರ್ನರ್ ಸ್ಥಾನ ಪಡೆದಿದ್ದಾರೆ. 3ನೇ ಸ್ಥ...