ಭಾರತ, ಮೇ 18 -- ಐಪಿಎಲ್ 2025ರ ಆವೃತ್ತಿಯ 61ನೇ ಪಂದ್ಯದಲ್ಲಿ, ಟೂರ್ನಿಯಿಂದ ಈಗಾಗಲೇ ಎಲಿಮನೇಟ್‌ ಆಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎಲ್‌ಎಸ್‌ಜಿ ತಂಡವು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಡುತ್ತಿದ್ದು, ಪ್ರತಿ ಪಂದ್ಯವನ್ನು ಗೆಲ್ಲಬೇಕಾಗದ ಅಗತ್ಯವಿದೆ. ಒಂದು ವೇಳೆ ಎಲ್ಲಾ ಪಂದ್ಯಗಳಲ್ಲಿ ಗೆದ್ದರೂ, ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗಿದೆ. ಆಗ ಮಾತ್ರ ಪ್ಲೇಆಫ್‌ ಹಂತಕ್ಕೆ ಪ್ರವೇಶಿಸುವುದು ಸಾಧ್ಯವಾಗಲಿದೆ.

ಇದನ್ನೂ ಓದಿ | ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಯಾವ ತಂಡದ ವಿರುದ್ಧ ಎಷ್ಟು ರನ್ ಗಳಿಸಿದ್ದಾರೆ; ಈ ವಿಶಿಷ್ಟ ಸಾಧನೆ ಮಾಡಿದ ಏಕೈಕ ಆಟಗಾರ

Published by HT Digital Content Services with permission from HT Kannada....