Bengaluru, ಮಾರ್ಚ್ 8 -- ಪ್ರತಿ ವಿಶೇಷ ಸಂದರ್ಭದಲ್ಲಿ ಡೂಡಲ್ ಮೂಲಕ ಗೌರವ ಸಲ್ಲಿಸುವ ಮೂಲಕ ಆ ದಿನವನ್ನು ಸ್ಮರಣೀಯವಾಗಿರುವ ಗೂಗಲ್, ಮಹಿಳಾ ದಿನಾಚರಣೆಗೆ ವಿಶೇಷ ಡೂಡಲ್ ರಚಿಸಿ, ಹೋಮ್‌ಪೇಜ್‌ನಲ್ಲಿ ಪ್ರದರ್ಶಿಸಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಈ ಬಾರಿ ಸ್ಟೆಮ್ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆಗಳು ಮತ್ತು ಲಿಂಗ ಸಮಾನತೆಯ ವಿಚಾರವನ್ನು ಗೂಗಲ್ ಪ್ರಸ್ತಾಪಿಸಿದೆ. ಪ್ರಸ್ತುತ ಜಾಗತಿಕ ಸ್ಟೆಮ್ ಕಾರ್ಯ ಕ್ಷೇತ್ರದಲ್ಲಿ ಮಹಿಳೆಯರು ಶೇ. 29 ರಷ್ಟಿದ್ದು, ಪ್ರತಿವರ್ಷ ಅವರ ಕೊಡುಗೆ ಮತ್ತು ಪ್ರಾತಿನಿಧ್ಯದಲ್ಲಿ ಹೆಚ್ಚಳವಾಗುತ್ತಿರುವುದನ್ನು ಗೂಗಲ್ ಪ್ರಶಂಸಿಸಿದೆ. ಜಾಗತಿಕ ಮಟ್ಟದಲ್ಲಿ ಮಹಿಳೆಯರ ಕೊಡುಗೆಗಳ ಮಹತ್ವವನ್ನು ಒತ್ತಿಹೇಳಲು ವಿಶ್ವಸಂಸ್ಥೆಯು 1975 ರಲ್ಲಿ ಪ್ರತಿ ವರ್ಷ ಮಾರ್ಚ್ 8ನ್ನು ಮಹಿಳಾ ದಿನಾಚರಣೆ ಎಂದು ಆಚರಿಸಲು ಕರೆಕೊಟ್ಟಿದೆ. ಅದರಂತೆ ಸಮಾಜದಲ್ಲಿ ಮಹಿಳೆಯರ ಪಾತ್ರ ಮತ್ತು ಅವರ ಕೊಡುಗೆಗಳನ್ನು ಪ್ರಶಂಸಿಸಲು, ಗೌರವಿಸಲು ಈ ಸಂದರ್ಭವನ್ನು ಬಳಸಿಕೊಳ್ಳಲಾಗುತ್ತದೆ.

ಅಂತರರಾಷ್ಟ್ರೀಯ ಮಹಿಳಾ ದ...