Bengaluru, ಫೆಬ್ರವರಿ 12 -- ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲೂ ಅದಕ್ಕೂ ವಾರದ ಮುಂಚೆಯೇ ಪ್ರೇಮಿಗಳ ವಾರ ಎಂದು ದಿನಕ್ಕೊಂದು ವಿಶೇಷ ನಿಗದಿಪಡಿಸಿ, ಅದನ್ನು ಜಾರಿಗೆ ತರುತ್ತಾರೆ. ಪ್ರೇಮಿಗಳ ದಿನವೂ ಹಾಗೆಯೇ.. ಎಲ್ಲಿ ಆಚರಣೆ, ಹೇಗೆ, ಯಾವ ಗಿಫ್ಟ್ ಕೊಡುವುದು, ಯಾವ ಬಟ್ಟೆ ಧರಿಸುವುದು ಎಂದೆಲ್ಲ ಹಲವು ರೀತಿಯಲ್ಲಿ ಚರ್ಚೆಗಳಾಗುತ್ತಿರುತ್ತವೆ. ಆ ದಿನದ ಪುಳಕ, ಆ ದಿನವನ್ನು ಅನುಭವಿಸಿವರಿಗೇ ಗೊತ್ತು.. ಪ್ರೀತಿಯ ಕಚಗುಳಿಯಲ್ಲಿ ಮಿಂದೆದ್ದವರಿಗೆ, ಫೆಬ್ರವರಿಯಲ್ಲೇ ಹೆಚ್ಚಿನ ಸಂಖ್ಯೆಯ ಬ್ರೇಕಪ್ ಕೂಡ ನಡೆಯುತ್ತದೆ ಎನ್ನುವುದು ತಿಳಿದಿರಲಿ. ಫೆಬ್ರವರಿಯಲ್ಲಿ ಪ್ರೇಮಿಗಳ ದಿನದಂದು ಹೆಚ್ಚಿನ ಬ್ರೇಕಪ್ ಪ್ರಕರಣ ಕಂಡುಬರುತ್ತವೆ, ಅದರಿಂದಾಗಿಯೇ ಫೆಬ್ರವರಿಯನ್ನು ಮುರಿದ ಹೃದಯಗಳ ತಿಂಗಳು ಎಂದೂ ಕೂಡ ಕರೆಯುತ್ತಾರೆ. ಅಧ್ಯಯನಗಳ ಪ್ರಕಾರ, ವಾಸ್ತವದಲ್ಲಿ ಪ್ರೀತಿಯು ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ, ಪ್ರೀತಿಯು ಗಾಳಿಯಲ್ಲಿದೆ ಎಂದು ಭಾಸವಾಗುತ್ತದೆ. ಕೆಲವರು ತಮ್ಮ ಪ್ರೇಮ ಸಂಬ...