Bengaluru, ಫೆಬ್ರವರಿ 5 -- ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಗೆ ಪ್ರೇಮಿಗಳು ವಿವಿಧ ರೀತಿಯ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಡೇಟಿಂಗ್, ಔಟಿಂಗ್, ಈಟಿಂಗ್, ಡಿನ್ನರ್, ಕ್ಯಾಂಡಲ್ ಲೈಟ್ ಪಾರ್ಟಿ ಎಂದೆಲ್ಲ ಹಲವು ರೀತಿಯಲ್ಲಿ ಅವರು ಸಿದ್ಧತೆ ಮಾಡಿಕೊಂಡಿರುತ್ತಾರೆ. ಪ್ರೇಮಿಗಳ ದಿನವು ದಂಪತಿಗಳಿಗೆ ಒಂದು ಆಚರಣೆಯಾಗಿದ್ದು, ಅದು ವಿವಿಧ ರೀತಿಯ ಪ್ರೇಮ ಪತ್ರಗಳು, ಪ್ರೇಮಗೀತೆಗಳು ಮತ್ತು ಕೆಂಪು ಗುಲಾಬಿಗಳಿಂದ ತುಂಬಿರುತ್ತದೆ. ದಂಪತಿಗಳ ಅತಿಯಾದ ವಿಜ್ರಂಭಣೆಯ ಆಚರಣೆಯು ಅವಿವಾಹಿತರಿಗೆ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಭಾವಿಸುವಂತೆ ಮಾಡುತ್ತದೆ, ಈ ರೀತಿಯ ಆಚರಣೆಯು ಅದ್ಧೂರಿಯಾಗಿ ನಡೆಯುವುದರಿಂದ, ಅವರಿಗೆ ತಾನು ಏಕಾಂಗಿ ಎಂಬ ಭಾವನೆ ಮೂಡುವಂತೆ ಮಾಡುತ್ತದೆ. ನನಗೂ ಪ್ರೇಮಿಯಿರಬೇಕು ಎಂದು ಅನ್ನಿಸುತ್ತದೆ. ಆದರೆ ನೀವು ಒಂಟಿಯಾಗಿದ್ದರೆ, ಅದಕ್ಕಾಗಿ ದುಃಖಿಸಬೇಕಿಲ್ಲ.

ಪ್ರೇಮಿಗಳ ದಿನ, ಪ್ರೀತಿ, ಪ್ರೇಮ ಮತ್ತು ಪ್ರಣಯದ ಮೇಲೆ ಹೆಚ್ಚು ಕೇಂದ್ರೀಕೃತವಾದ ದಿನದಂತೆ ತೋರುತ್ತಿದ್ದರೂ, ಪ್ರೀತಿಯು ಕೇವಲ ಪ್ರಣಯದ ಬಗ್ಗೆ ಮಾತ್ರವ...