ಭಾರತ, ಫೆಬ್ರವರಿ 5 -- ಬಾಲಿವುಡ್‌ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಸಿನಿಮಾ 'ಸ್ಕೈ ಫೋರ್ಸ್' ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟಿಸಿದ ಸ್ಕೈ ಫೋರ್ಸ್ ಸಿನಿಮಾವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆಂಬುದು ಗಳಿಕೆಯಾದ ಹಣದ ಮೂಲಕವೇ ಸಾಬೀತಾಗಿದೆ. ವಾರಾಂತ್ಯದಲ್ಲಿ ಗಲ್ಲಾಪೆಟ್ಟಿಯನ್ನು ತುಂಬಿಸಿಕೊಂಡ ಸಿನಿಮಾ ಸೋಮವಾರದಿಂದ (ಫೆ 3) ಕುಸಿತ ಕಂಡಿದೆ. ಈ ಚಿತ್ರ ಸೋಮವಾರ 1.35 ಕೋಟಿ ರೂ.ಗಳನ್ನು ಗಳಿಸಿದೆ. ಸ್ಕೈ ಫೋರ್ಸ್ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೇ 86.5 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ.

ಶಾಹಿದ್ ಕಪೂರ್ ಅವರ 'ದೇವಾ' ಸಿನಿಮಾ 'ಸ್ಕೈ ಫೋರ್ಸ್‌' ಈ ಸಿನಿಮಾಗೆ ಪೈಪೋಟಿ ನೀಡುತ್ತಿದೆ. 'ದೇವಾ' ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ದೊಡ್ಡ ಮಟ್ಟದಲ್ಲಿ ಇರದೇ ಇದ್ದರೂ, ಅಕ್ಷಯ್ ಕುಮಾರ್ ಸಿನಿಮಾದ ಹಣ ಗಳಿಕೆಯನ್ನು ಆ ಸಿನಿಮಾ ಕಡಿಮೆ ಮಾಡುತ್ತಿದೆ 'ಟೈಮ್ಸ್‌ ಆಪ್ ಇಂಡಿಯಾ' ವರದಿ ಮಾಡಿದೆ.

ಇದನ್ನೂ ಓದಿ: ನಕಲಿ ಒಡವೆ ಕಂಡು ಕೂಗಾಡಿದ ಸಿಂಚನ; ಮನೆಯಲ್...