ಭಾರತ, ಫೆಬ್ರವರಿ 27 -- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ರಾಮಾಚಾರಿ ಇಬ್ಬರೂ ಈಗ ತಮ್ಮ ಪ್ರೀತಿಯನ್ನು ತೋರಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಒಬ್ಬರ ಮೇಲೆ ಇನ್ನೊಬ್ಬರಿಗೆ ಪ್ರೀತಿ ಇದ್ದರೂ ಸಹ ಅವರು ಹಂಚಿಕೊಂಡಿರಲಿಲ್ಲ. ಚಾರು ಆಗಾಗ ರಾಮಾಚಾರಿ ಬಳಿ ಈ ವಿಷಯದ ಕುರಿತು ಮಾತಾಡಿದ್ದು ಬಿಟ್ಟರೆ ಅವರಿಬ್ಬರ ನಡುವೆ ಏನೂ ನಡೆದಿರಲಿಲ್ಲ. ಈ ಅವರಿಬ್ಬರೂ ಹೊಸ ಬದುಕಿನ ಅಧ್ಯಾಯಕ್ಕೆ ತೆರೆದುಕೊಳ್ಳಲು ಹವಣಿಸುತ್ತಿದ್ದಾರೆ. ರಾಮಾಚಾರಿ ಮತ್ತು ಚಾರು ಇಬ್ಬರೂ ಮಗು ಬೇಕು ಎಂದು ಅಂದುಕೊಂಡಿದ್ದಾರೆ. ಹೀಗೆ ಒಂದು ದಿನ ರಾಮಾಚಾರಿ ಮತ್ತು ಚಾರು ನಡು ಮನೆಯಲ್ಲಿ ಮಾತುಕತೆ ಮಾಡುತ್ತಾ ಇರುತ್ತಾರೆ.

ರಾಮಾಚಾರಿ ಹೇಳುತ್ತಾನೆ "ಇಂದು ಆಫೀಸ್‌ಗೆ ರಜೆ" ಎಂದು. ಆಗ ಚಾರು ಹೇಳುತ್ತಾಳೆ "ಹೌದಾ? ಹಾಗಾದ್ರೆ ನೀನು ದೇವಸ್ಥಾನಕ್ಕೆ ಹೋಗು ಅಲ್ಲಿ ಪೂಜೆ ಇದ್ಯಲ್ಲ" ಎಂದು. ಅವಳು ಆ ರೀತಿ ಮಾತಿನಲ್ಲೇ ಎಲ್ಲವನ್ನೂ ಮುಗಿಸಿದ್ದು ರಾಮಾಚಾರಿಗೆ ಇಷ್ಟ ಆಗೋದಿಲ್ಲ. ಅವನು ಚಾರು ಹತ್ತಿರ ಇನ್ನು ಏನೋ ಬೇಕು ಎಂದು ಬಯಸುತ್ತಿರುತ್ತಾನೆ. ಅವನು ಬಯಸಿದ್ದು ಕೇವ...