Bengaluru, ಏಪ್ರಿಲ್ 6 -- ಇಂದು ರಾಮನವಮಿಯ ವಿಶೇಷ ದಿನ. ದೇಶದಾದ್ಯಂತ ಜನರು ಈ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಶ್ರೀ ರಾಮನ ದೇವಸ್ಥಾನಗಳಲ್ಲಿ ಭಕ್ತಸಾಗರವೇ ಹರಿದುಬರುತ್ತಿದೆ. ಇನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ರಾಮ ನವಮಿ ಇನ್ನಷ್ಟು ವೈಭವದಿಂದ ನಿಷ್ಠೆಯಿಂದ ಆಚರಿಸಲ್ಪಡುತ್ತಿದೆ. ರಾಮ ನವಮಿಯಂದು ಇಲ್ಲಿ ನಡೆಯುವ ಆಚರಣೆಗಳನ್ನು ನೋಡಲು ಜಗತ್ತಿನಾದ್ಯಂತ ಜನ ಕಾತುರದಿಂದ ಕಾಯುತ್ತಿರುತ್ತಾರೆ. ಈ ಬಾರಿಯೂ ಭವ್ಯವಾದ ರಾಮ ಮಂದಿರವು ಆಧ್ಯಾತ್ಮಿಕ ಮತ್ತು ಖಗೋಳ ಅದ್ಭುತಕ್ಕೆ ಸಾಕ್ಷಿಯಾಯಿತು. ಅದುವೇ ಶ್ರೀ ರಾಮನ ಹಣೆಯ ಮೇಲೆ ಸೂರ್ಯ ತಿಲಕವಿಡುವುದು. ಸೂರ್ಯ ದೇವರು ಸ್ವತಃ ರಾಮನ ಹಣೆಗೆ ದೈವಿಕ ತಿಲಕವನ್ನು ನೀಡುವುದನ್ನು ಸಂಕೇತಿಸುವ ಈ ಅಪರೂಪದ ಘಟನೆಯು ಆನ್‌ಲೈನ್‌ನಲ್ಲಿ ಸಾವಿರಾರು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.

ಶ್ರೀ ರಾಮನ ಜನ್ಮ ದಿನವನ್ನು ಆಚರಿಸುವ ರಾಮ ನವಮಿಯ ಇಂದು ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ರಾಮ್ ಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕಿನ ಕಿರಣವನ್ನು ನಿರ್...