Bengaluru, ಫೆಬ್ರವರಿ 10 -- ಫೆಬ್ರವರಿಯ ಮೊದಲ ಎರಡು ವಾರಗಳು ಎಂದರೆ, ಪ್ರೇಮಿಗಳಿಗೆ ಹಬ್ಬವೇ ಸರಿ. ಅದರಲ್ಲೂ ವ್ಯಾಲೆಂಟೈನ್ಸ್ ವೀಕ್ ಹೆಸರಿನಲ್ಲಿ ವಿವಿಧ ರೀತಿಯ ಆಚರಣೆಗೆ, ಸಂಭ್ರಮಕ್ಕೆ ಒಂದು ಕಾರಣವೂ ಇರುತ್ತದೆ. ಆದರೆ, ಎಲ್ಲರಿಗೂ ವ್ಯಾಲೆಂಟೈನ್ಸ್ ಡೇ, ವ್ಯಾಲೆಂಟೈನ್ಸ್ ವೀಕ್ ಆಚರಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರು ಹೇಗೆ ಇದರಿಂದ ತಪ್ಪಿಸಿಕೊಳ್ಳುವುದು ಮತ್ತು ಲವ್ ಪ್ರಪೋಸಲ್‌ಗೆ ಬೇಡ ಎನ್ನುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ. ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಪ್ರಪೋಸಲ್ ಡೇ ದಿನದಂದು ಅನೇಕ ಪ್ರಪೋಸಲ್‌ಗಳನ್ನು ಸ್ವೀಕರಿಸುವುದು ತುಂಬಾ ಒಳ್ಳೆಯದು ಎಂದು ಅನೇಕ ಜನರು ಭಾವಿಸಬಹುದು. ಆದಾಗ್ಯೂ, ಮದುವೆಯಾಗಲು ಅಥವಾ ಯಾರನ್ನಾದರೂ ಡೇಟ್ ಮಾಡಲು ಸಿದ್ಧರಿಲ್ಲದ ಜನರನ್ನು ಕೇಳಿದರೆ ನಮಗೆ ತಿಳಿಯುತ್ತದೆ ಅವರು ಯಾರನ್ನಾದರೂ ತಿರಸ್ಕರಿಸುವುದು ಯಾವಾಗಲೂ ಕಷ್ಟ ಎಂದು ಹೇಳುತ್ತಾರೆ. ಪ್ರೀತಿಗೆ, ಪ್ರಪೋಸಲ್‌ಗೆ ಹೇಗೆ ಬೇಡ ಎನ್ನುವುದು ಎಂಬ ಬಗ್ಗೆ ಅವರು ಒಂದೆಡೆ ಚಿಂತೆಯಲ್ಲಿದ್ದರೆ, ಇನ್ನೊಂದೆಡೆ ಗೊಂದಲಕ್ಕೊಳ...