ಭಾರತ, ಮಾರ್ಚ್ 10 -- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಆಗಿದೆ. ಆದರೆ, ಅದರಿಂದಾದ ಸಮಸ್ಯೆಗಳು ಮಾತ್ರ ನಿಲ್ಲುತ್ತಿಲ್ಲ.

ದೇವಸ್ಥಾನಕ್ಕೆ ಬಂದ ಪಿಂಕಿಗೆ ಸತ್ಯ ಗೊತ್ತಾಗಿದೆ. ಸೀನ ರಶ್ಮಿ ಕೊರಳಿಗೆ ತಾಳಿ ಕಟ್ಟಿದ್ದಾನೆ ಎನ್ನುವ ಸತ್ಯದ ಅರಿವಾಗಿದೆ.

ಸೀನನೇ ರಶ್ಮಿಯನ್ನು ಮದುವೆ ಆಗಿದ್ದು ಎಂಬ ವಿಚಾರ ತಿಳಿದ ತಕ್ಷಣ ಅವಳು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಅವಳನ್ನು ಕಂಡು ಸೀನನಿಗೆ ಬೇಸರ ಆಗಿದೆ.

ಪಿಂಕಿಯ ತಂದೆ ಕೋಪದಲ್ಲಿ ಸೀನನನ್ನು ನೋಡಿದ್ದಾರೆ. ಆಗ, ಸೀನ ಬೇಡ ಸತ್ಯ ಹೇಳಬೇಡಿ ಎಂದು ಕೈ ಮುಗಿದು ಕೇಳಿಕೊಂಡಿದ್ದಾನೆ.

ಶಿವು ಮತ್ತು ಪಾರು ಇಬ್ಬರೂ ಮನೆಯಿಂದ ಹೊರಗಿರುತ್ತಾರೆ. ಅದೇ ಸಂದರ್ಭಕ್ಕೆ ಅವರ ಮನೆಗೆ ಯಾವುದೋ ನೋಟಿಸ್ ಬರುತ್ತದೆ.

ರಾಣಿ ಒಬ್ಬಳೇ ಮನೆಯಲ್ಲಿರುತ್ತಾಳೆ. ಅವಳಿಗೆ ಗಾಬರಿ ಆಗುತ್ತದೆ. ಅವಳು ಕಾಲ್ ಮಾಡಿ ಶಿವು ಹಾಗೂ ಪಾರು ಇಬ್ಬರನ್ನೂ ಕರೆಯುತ್ತಾಳೆ.

ಶಿವು ಮತ್ತು ಪಾರು ತಕ್ಷಣ ಮನೆಗೆ ಬರುತ್ತಾರೆ. ಆ ನೋಟಿಸ್‌ನಲ್ಲಿ ಏನು ಬರೆದಿದೆ ಎಂದು ಪಾರು ಓದುತ್ತಾಳೆ. ಆಗ ಅವಳಿಗೆ ಸತ್ಯ ತಿಳಿಯುತ್ತದೆ. ...