ಭಾರತ, ಏಪ್ರಿಲ್ 24 -- ಭಾರತದ ತಲೆಯ ಭಾಗದಲ್ಲಿರುವ ಹಿಮಾಲಯ ಪರ್ವತ ಶ್ರೇಣಿ ಸದಾ ಅಚ್ಚರಿಯ ಆಗರ. ಹಿಮಚ್ಛಾದಿತ ಪರ್ವತ ಶ್ರೇಣಿ ಭಾಗದಲ್ಲಿ ಪದೇಪದೆ ಭೂಕಂಪವಾಗುತ್ತಿರುತ್ತದೆ. ಪರ್ವತದ ತಪ್ಪಲಲ್ಲಿರುವ ಪ್ರದೇಶಗಳಿಗೆ ಹಾನಿ ಉಂಟಾಗುವುದು ಸಾಮಾನ್ಯ. ಇದಕ್ಕೆ ಅದರ ಕೆಳಗಿರುವ ಟೆಕ್ಟೋನಿಕ್ ಪ್ಲೇಟ್ ಅಥವಾ ಭೂತಟ್ಟೆಗಳ ಚಲನೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಆದಾಗ್ಯೂ, ಹಿಮಾಲಯ ಅಂದರೆ ಬಹುತೇಕರಿಗೆ ಅದೊಂದು ಅಚ್ಚರಿಯೇ ಸರಿ. ಭಾರತೀಯ ಭೂತಟ್ಟೆ ಜಾರುವ ಕಾರಣ ಭಾರತೀಯ ಭೂಭಾಗ ಕೆಳಕ್ಕೆ ಎಳೆಯಲ್ಪಡುತ್ತಿದೆ ಎಂದು ನಂಬಲಾಗಿತ್ತು. ಭಾರತೀಯ ಭೂತಟ್ಟೆಯ ಚಲನೆಗೆ ಸಂಬಂಧಿಸಿ ಹೊಸ ವಿಚಾರದ ಕಡೆಗೆ ಹೊಸ ಸಂಶೋಧನೆ ಗಮನಸೆಳೆದಿದೆ.

ಭಾರತೀಯ ಭೂತಟ್ಟೆ ಮತ್ತು ಯುರೇಷಿಯನ್ ಭೂತಟ್ಟೆಯ ನಡುವಿನ ಬೃಹತ್ ಘರ್ಷಣೆಯ ಪರಿಣಾಮವಾಗಿ ಗ್ರೇಟ್ ಹಿಮಾಲಯ ಹುಟ್ಟಿಕೊಂಡಿತು. ಈ ವಿಚಾರ ಎಲ್ಲರಿಗೂ ತಿಳಿದಿದೆ. ಈ ಪರ್ವತವು ಸುಮಾರು 60 ಮಿಲಿಯನ್ ವರ್ಷಗಳ ಹಿಂದೆ ರಚನೆಯಾದುದು. ಅಂದಿನಿಂದ ಇದು ಆಕಾರ ಬದಲಿಸುತ್ತಲೇ ಇದೆ. ಎರಡು ಭೂತಟ್ಟೆಗಳ ಘರ್ಷಣೆಯು ಹಿಮಾಲಯ...