Bengaluru, ಏಪ್ರಿಲ್ 23 -- ಶಂಖಪುಷ್ಪ ಹೂವು. ಆಯುರ್ವೇದದಲ್ಲಿ ಮತ್ತು ಪ್ರಾಚೀನ ಔಷಧೀಯ ಶಾಸ್ತ್ರಗಳಲ್ಲಿ ಈ ಹೂವಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರಕೃತಿಯಲ್ಲಿ ಕಾಣಸಿಗುವ ಸುಂದರ ಹೂವುಗಳಲ್ಲಿ ಅತ್ಯಂತ ನಯನ ರಮಣೀಯ ಹೂವುಗಳಲ್ಲಿ ಇದೂ ಒಂದು. ಬಣ್ಣದ ವಿಶೇಷತೆಯಿಂದಲೇ ಗಮನ ಸೆಳೆಯುವ ಈ ಹೂವು ಕೇವಲ ಸುಂದರ ಮಾತ್ರವಲ್ಲ ಅದ್ಭುತ ಶಕ್ತಿ ತುಂಬಿದ ಔಷಧೀಯ ಗುಣಗಳನ್ನೂ ಹೊಂದಿದೆ.

ಇತ್ತೀಚಿನ ದಿನಗಳಲ್ಲಿ ವೈವಿಧ್ಯಮಯ ಚಹಾಗಳು ಚಹಾ ಪ್ರಿಯರ ಗಮನ ಸೆಳೆಯುತ್ತಿದೆ. ಅದರಲ್ಲೂ ಬೆಂಗಳೂರಿನಂತಹ ನಗರಗಳಲ್ಲಿ ಹಿಂದೆಂದೂ ಸವಿದಿರದ ಹಲವು ರೀತಿಯ ಚಹಾಗಳು ಟ್ರೆಂಡ್ ಆಗುತ್ತಿವೆ. ಅಂತಹ ಹೊಸ ಟ್ರೆಂಡ್ ಗಳಲ್ಲಿ ಶಂಖ ಪುಷ್ಪ ಹೂವಿನ ಚಹಾ ತನ್ನದೇ ಆದ ಸ್ಥಾನವನ್ನು ಪಡೆಯುತ್ತಿದೆ. ಹಾಗಾದರೆ ಏನಿದರ ವಿಶೇಷ? ಅರೋಗ್ಯ ವೃದ್ಧಿಸುವಲ್ಲಿ ಇದರ ಪಾತ್ರವೇನು? ಮನೆಯಲ್ಲಿಯೇ ಶಂಖಪುಷ್ಪದ ಚಹಾ ತಯಾರಿಸುವುದು ಹೇಗೆ? ನೀವೇ ಓದಿ.

ಶಂಖ ಪುಷ್ಪ ಹೂವಿನ ಚಹಾ

ಶಂಖ ಪುಷ್ಪ ಹೂವು ಎಂಬ ನೀಲ ಹೂವು, ಅದರ ಆರೋಗ್ಯ ಪ್ರಯೋಜನಗಳಿಗಾಗಿ ಎಲ್ಲೆಡೆ ಪ್ರಸಿದ್ಧವಾಗಿದೆ. ಇದರಲ...