Bengaluru, ಮೇ 27 -- ಬೆಂಗಳೂರು: ರಾಜ್ಯಕ್ಕೆ ಮುಂಗಾರು ಮಳೆ ನಿಗದಿಗಿಂತ ನಾಲ್ಕು ದಿನ ಮುಂಚಿತವಾಗಿ ಆಗಮಿಸಿದ್ದು, ಈಗಾಗಲೇ ಬಹಳಷ್ಟು ಪ್ರದೇಶಗಳಲ್ಲಿ ಮೇ ಅಂತ್ಯದ ವೇಳೆಯ ವಾಡಿಕೆಗಿಂತ ಅಧಿಕ ಪ್ರಮಾಣದ ಮಳೆಯಾಗಿದೆ. ಅದೇ ರೀತಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಇತಿಹಾಸದಲ್ಲಿಯೇ ಅತ್ಯಂತ ತೇವಾಂಶಭರಿತ ಮೇ ತಿಂಗಳನ್ನು ದಾಖಲಿಸಿದೆ. ಮೇ ತಿಂಗಳ ತಾಪಮಾನ ಮತ್ತು ಮಳೆ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿದೆ. ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಮೇ 26 ರಂದು ಬೆಳಿಗ್ಗೆ 6 ಗಂಟೆಯ ವೇಳೆಗೆ ನಗರದಲ್ಲಿ 307.9 ಮಿ.ಮೀ (30.7 ಸೆಂ.ಮೀ) ಮಳೆಯಾಗಿದ್ದು, 2023 ರ ಮೇ ತಿಂಗಳಲ್ಲಿ ದಾಖಲಾಗಿದ್ದ 305.4 ಮಿ.ಮೀ ಹಿಂದಿನ ದಾಖಲೆಯನ್ನು ಮುರಿದಿದೆ.

ಈ ಬಾರಿಯ ಮಳೆಯ ದಾಖಲೆ, ಕಳೆದ ವರ್ಷ ದಾಖಲೆಯನ್ನು ಮುರಿದಿರುವುದು ಮಾತ್ರವಲ್ಲದೆ, ಮೇ ತಿಂಗಳು ಕೊನೆಯಾಗಲು ಇನ್ನೂ ಕೆಲವು ದಿನಗಳು ಇರುವುದರಿಂದ ಇನ್ನೂ ಮಳೆಯ ಪ್ರಮಾಣ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ರಾಜ್ಯದ ಕರಾವಳಿ ಭಾಗಗಳಲ್ಲಿ ಕೂಡ ದಾಖಲೆಯ ಪ್ರ...