Bengaluru, ಮೇ 4 -- ಕಳೆದೈದು ವರ್ಷಗಳಿಂದ ಬೆಂಗಳೂರಿನ ಕೆಲವು ಕನ್ನಡಿಗರು ಹಾಗೂ ಕೆಲವು ಮಾಧ್ಯಮಗಳು ಬಾಳ್‌ ಠಾಕ್ರೆ ಕಾಲದ ಸೈನಿಕರಂತೆ ಆಡುತ್ತಿದ್ದಾರೆ. ಪಕ್ಕದ ತಮಿಳುನಾಡಿನ ದ್ರಾವಿಡ ಪ್ರತ್ಯೇಕತಾವಾದದ ರಾಜಕೀಯದ ಚಕ್ರವ್ಯೂಹಕ್ಕೆ ಸಿಲುಕಿ ಅತಿಯಾಗಿ ವರ್ತಿಸುತ್ತಿದ್ದಾರೆ. ಕನ್ನಡಾಭಿಮಾನವನ್ನು ಬೀದಿಗೆ ತಂದು ನಿಲ್ಲಿಸುತ್ತಿದ್ದಾರೆ. ಆದರೆ ಕನ್ನಡ ಅಕ್ಷರಗಳು ನಿಜವಾಗಿಯೂ ಅರಳಬೇಕಿರುವಲ್ಲಿ ನಾವೆಲ್ಲರೂ ಕಣ್ಮುಚ್ಚಿ ಕುಳಿತಿದ್ದೇವೆ. ಆದರೆ ರಾಜಕೀಯ ಹಾಗೂ ದ್ವೇಷ ಕೆರಳುವ ಜಾಗದಲ್ಲಿ ಕನ್ನಡವನ್ನು ಬಿತ್ತುವ ಕೆಲಸ ಮಾಡುತ್ತಿದ್ದೇವೆ.

ಸೋನು ನಿಗಮ್‌ ನೀಡಿದ ಹೇಳಿಕೆ ಆಧರಿಸಿ, ಎಲ್ಲರೂ ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಕನ್ನಡ ಚಿತ್ರರಂಗದಿಂದ ಅವರನ್ನು ಹೊರಹಾಕಬೇಕು ಎಂದು ನಿರ್ಮಾಪಕರು ಸೇರಿ ಸಾಕಷ್ಟು ಜನ ಕೂಗಾಡುತ್ತಿದ್ದಾರೆ. ಅಷ್ಟಕ್ಕೂ ಕನ್ನಡ ಗಾಯಕರಿಗೆ ಅವಕಾಶ ನೀಡಿ, ಕನ್ನಡ ನಾಯಕಿಯರಿಗೆ ಪಾತ್ರ ನೀಡಿ ಎಂದೂ ಗೋಗರೆದಾಗ ಇವರೆಲ್ಲರ ಕನ್ನಡ ಪ್ರೇಮವು ಯಾವ ಕಿಸೆಯೊಳಗೆ ಉಸಿರುಗಟ್ಟಿ ಸಾಯುತ್ತಿತ್ತೋ ತಾಯಿ ಭುವನೇಶ್ವರಿಯೇ ಬ...