Bengaluru, ಫೆಬ್ರವರಿ 27 -- Kannada Serial TRP: ಕನ್ನಡ ಕಿರುತೆರೆಯ ಏಳನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಅಚ್ಚರಿ ವಿಚಾರ ಏನೆಂದರೆ, ಜೀ ಕನ್ನಡದ ಮೂರು ಧಾರಾವಾಹಿಗಳು ನಂಬರ್‌ 1 ಪಟ್ಟ ಪಡೆದುಕೊಂಡಿವೆ. ಈ ಮೂಲಕ ಟಿಆರ್‌ಪಿಯಲ್ಲಿಯೂ ಹೊಸ ದಾಖಲೆ ಬರೆದಿವೆ. ಇತ್ತೀಚೆಗಷ್ಟೇ ಶುರುವಾದ ನಾ ನಿನ್ನ ಬಿಡಲಾರೆ ಸೀರಿಯಲ್‌, ಟಾಪ್‌ ಸ್ಥಾನಕ್ಕೆ ದಾಪುಗಾಲಿಟ್ಟಿದೆ. ಈ ಮೂಲಕ ಶುರುವಾದ ನಾಲ್ಕೈದು ವಾರಕ್ಕೇ ನಂಬರ್‌ 1 ಧಾರಾವಾಹಿಯಾಗಿ ಹೊರಹೊಮ್ಮಿದೆ. ಏಳನೇ ವಾರದ ಟಿಆರ್‌ಪಿಯಲ್ಲಿ ಜೀ ಕನ್ನಡ ವಾಹಿನಿಯ ಸೀರಿಯಲ್‌ಗಳ ಟಿಆರ್‌ಪಿ ಲಿಸ್ಟ್‌ ಇಲ್ಲಿದೆ.

ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 5:30 ರಿಂದ ರಾತ್ರಿ 10 ಗಂಟೆ ಅವಧಿಯವರೆಗೆ ಒಟ್ಟು ಒಂಬತ್ತು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ 9 ಧಾರಾವಾಹಿಗಳ ಪೈಕಿ ಯಾವ ಸೀರಿಯಲ್‌ಗಳಿಗೆ ವೀಕ್ಷಕನ ಬಹುಪರಾಕ್‌ ಸಿಕ್ಕಿದೆ? ಯಾವ ಸೀರಿಯಲ್‌ ರೇಟಿಂಗ್‌ ಕುಸಿದಿದೆ ಎಂಬ ಮಾಹಿತಿ ಇಲ್ಲಿದೆ. ಕಳೆದ ನಾಲ್ಕು ವಾರಗಳಿಂದ ನಂಬರ್‌ ಸ್ಥಾನದಲ್ಲಿ ಬೀಗುತ್ತಿದ್ದ ...