ಭಾರತ, ಮಾರ್ಚ್ 20 -- ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಶುಕ್ರನ ಸಂಚಾರ ಅಥವಾ ಸ್ಥಾನದಲ್ಲಿನ ಬದಲಾವಣೆ ಮೇಷದಿಂದ ಮೀನ ರಾಶಿವರೆಗೆ ಎಲ್ಲಾ ರಾಶಿಯವರ ಮೇಲೂ ಸಾಕಷ್ಟು ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಭಾರಿ ಅನುಕೂಲವೂ ಉಂಟಾಗುತ್ತದೆ, ಕೆಲವರಿಗೆ ಇದು ಅದೃಷ್ಟ ಬದಲಾಗುವ ಕಾಲವೂ ಆಗಿರುತ್ತದೆ.
ಪ್ರಸ್ತುತ ಶುಕ್ರನು ಹಿಮ್ಮುಖ ಚಲನೆಯಲ್ಲಿದ್ದಾನೆ. ಇದನ್ನು ಶುಕ್ರ ವಕ್ರೀ ಎಂದು ಕರೆಯಲಾಗುತ್ತದೆ. ಆದರೆ ಶೀಘ್ರದಲ್ಲಿ ಶುಕ್ರನು ನೇರವಾಗಿ ಚಲಿಸಲು ಆರಂಭಿಸುತ್ತಾನೆ. ಮಾರ್ಚ್ 2 ರಂದು ಶುಕ್ರನು ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಿದನು. ಏಪ್ರಿಲ್ 13ಕ್ಕೆ ಶುಕ್ರ ನೇರ ಚಲನೆಯನ್ನು ಆರಂಭಿಸುತ್ತಾನೆ. ಈ ಬೆಳವಣಿಗೆಯು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಶುಭ ಹಾಗೂ ಕೆಲವು ರಾಶಿಯವರಿಗೆ ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಶುಕ್ರನ ನೇರ ಸಂಚಾರವು 3 ರಾಶಿಚಕ್ರ ಚಿಹ್ನೆಗಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.