Bengaluru, ಮಾರ್ಚ್ 24 -- ಬೆಂಗಳೂರು: ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ತರಕಾರಿಗಳ ಬೆಲೆ ಇಳಿದಿರುವುದು ಒಂದಿಷ್ಟು ಖುಷಿ ನೀಡಿದೆ. ಯುಗಾದಿ ಹಬ್ಬವೂ ಹತ್ತಿರವಾಗುತ್ತಿದ್ದು, ತರಕಾರಿ ಬೆಲೆ ಇಳಿದಿರುವುದು ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿದೆ. ಜತೆಗೆ ಬೇಳೆ ಮತ್ತು ಅಡುಗೆ ಎಣ್ಣೆಯ ಬೆಲೆಯೂ ಇಳಿದಿದೆ. ತರಕಾರಿ ಬೆಲೆ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಕಡಿಮೆಯಾಗಿದೆ. ಅದರಲ್ಲೂ ಈರುಳ್ಳಿ ಮತ್ತು ಟೊಮೆಟೊ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಬೆಲೆ ಕುಸಿತಕ್ಕೆ ಕಾರಣಗಳನ್ನು ಹುಡುಕಿ ಹೊರಟಾಗ ತೋಟಗಾರಿಕೆ ತಜ್ಞರ ಪ್ರಕಾರ ಬೇಡಿಕೆಗಿಂತಲೂ ಹೆಚ್ಚಾಗಿ ತರಕಾರಿ ಭಾರಿ ಪ್ರಮಾಣದಲ್ಲಿ ಸರಬರಾಜಾಗುತ್ತಿರುವುದೇ ಬೆಲೆ ಕುಸಿತಕ್ಕೆ ಕಾರಣ ಎನ್ನುತ್ತಾರೆ.
ಸಗಟು ಮತ್ತು ಚಿಲ್ಲರೆ ಬೆಲೆ ಇಳಿದಿದೆ. ಉದಾಹರಣೆಗೆ ಕೆಲವು ತಿಂಗಳ ಹಿಂದೆ ಈರುಳ್ಳಿ ಬೆಲೆ ಕೆಜಿಗೆ ಶತಕದ ಗಡಿ ಸಮೀಪಿಸಿದ್ದು ಈಗ 30-40 ರೂ.ಗೆ ಕುಸಿದಿದೆ. ಟೊಮೆಟೊ ಬೆಲೆ 14-16 ರೂಗಳಿಗೆ ಕುಸಿದಿರುವುದನ್ನು ಕಾಣಬಹುದಾಗಿದೆ. ಹಾಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.