Bengaluru, ಫೆಬ್ರವರಿ 11 -- ಪ್ರೇಮಿಗಳು ಕಾತರತೆಯಿಂದ ಕಾಯುತ್ತಿದ್ದ ಪ್ರೇಮಿಗಳ ದಿನಕ್ಕೆ ಇನ್ನೂ ಕೆಲವೇ ದಿನಗಳು ಉಳಿದಿದೆ. ಫೆಬ್ರವರಿ 7 ರಿಂದ ಪ್ರೇಮಿಗಳ ವಾರವೂ ಗುಲಾಬಿ ಹೂವು ನೀಡುವ ಮೂಲಕ ಪ್ರಾರಂಭವಾಗಿದೆ. ಹಲವು ಮಂದಿ ತಮ್ಮ ಸಂಗಾತಿಗೆ ನೀಡುವ ಉಡುಗೊರೆ, ಚಾಕೋಲೆಟ್, ಟ್ರಿಪ್ ಹೀಗೆ ವಿವಿಧ ಪ್ಲ್ಯಾನ್ ಮಾಡುತ್ತಿದ್ದರೆ, ಇನ್ನೂ ಹಲವರಿಗೆ ಪ್ರೇಮಿಗಳೇ ಇರದೆ ತಮ್ಮ ಜೀವನದಲ್ಲಿ ಒಬ್ಬಂಟಿಗಳಾಗಿರುವುದನ್ನು ನಾವು ನೋಡಿದ್ದೇವೆ. ಈ ಪ್ರೇಮಿಗಳ‌ ದಿನಾಚರಣೆಯಂದು ಸಿಂಗಲ್ಸ್‌ ಕೂಡ ತಮ್ಮ ಸ್ನೇಹಿತರೊಂದಿಗೆ ಅಥವಾ ಒಬ್ಬಂಟಿಗರಾಗಿಯೇ ಪ್ರೇಮಿಗಳಿಗಿಂತಲು ನಾವೇನು ಕಮ್ಮಿ‌ಯಿಲ್ಲ ಎಂದು ಈ ದಿನಾಚರಣೆಯನ್ನು ಹೇಗೆ ಕಳೆಯುವುದು ಎನ್ನುವುದು ನಿಮ್ಮ ಯೋಚನೆಯಾಗಿದ್ದರೆ, ಇಲ್ಲೊಂದಿಷ್ಟು ಟಿಪ್ಸ್ ನಿಮಗಾಗಿ.

ಇನ್ನೂ ನಿಮಗೆ ಪ್ರೇಮಿಗಳಿಲ್ಲ ಎಂದು ದುಃಖಿಸುವ ಬದಲು ನೀವಿಡುವ ಪ್ರತೀ ಹೆಜ್ಜೆಯಲ್ಲು ಜೊತೆಯಾಗುವ ನಿಮ್ಮ ದಿ ಬೆಸ್ಟ್ ಫ್ರೆಂಡ್ಸ್‌ಗಳೊಂದಿಗೆ ಈ ಪ್ರೇಮಿಗಳ ದಿನಾಚರಣೆಯನ್ನು ಕಳೆಯಲು ಸಜ್ಜಾಗಿ. ಅದಕ್ಕೆ ಬೇಕಾದ ಐದು ಪ್ರಮುಖ ಹೊಸ ಐಡಿಯಾ...