ಭಾರತ, ಫೆಬ್ರವರಿ 12 -- Train Robbery: ರೈಲ್ವೆ ಪ್ರಯಾಣಿಕರ ಸೋಗಿನಲ್ಲಿ ಮೈಸೂರು- ಬೆಂಗಳೂರು ಮೆಮು ರೈಲು ಏರಿ, ಪ್ರಯಾಣಿಕರನ್ನು ಬೆದರಿಸಿ ದರೋಡೆ ಮಾಡಿದ ಪ್ರಕರಣ ಸಂಬಂಧಿಸಿ ರೈಲ್ವೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಮೈಸೂರು- ಬೆಂಗಳೂರು ಮೆಮು ರೈಲು ಏರಿದ ಶಂಕಿತರು ಚಾಕು, ಚೂರಿ, ಕಬ್ಬಿಣದ ರಾಡ್ ಹಿಡಿದು ಪ್ರಯಾಣಿಕರನ್ನು ಬೆದರಿಸಿ ಅವರಿಂದ ಹಣ, ಚಿನ್ನಾಭರಣ ದೋಚಿದ್ದರು. ಎರಡು ದಿನ ಹಿಂದೆ (ಫೆ 10) ಈ ದರೋಡೆ ನಡೆದಿತ್ತು. ಈ ದರೋಡೆ ಪ್ರಕರಣವು ರೈಲ್ವೆ ಪ್ರಯಾಣಿಕರಲ್ಲಿ ಕಳವಳಕ್ಕೆ ಕಾರಣವಾಗಿತ್ತು.
ಮೈಸೂರಿನಿಂದ ಬೆಂಗಳೂರಿಗೆ ಹೊರಟ ಮೆಮು ರೈಲಿಗೆ ಮೈಸೂರು ನಿಲ್ದಾಣದ ಒಂದು ತುದಿಯಲ್ಲಿ ನಿಂತಿದ್ದ ಶಂಕಿತ ಆರೋಪಿಗಳು ಪ್ರಯಾಣಿಕರಂತೆ ರೈಲು ಏರಿದ್ದರು. ಫೆ 10 ರಂದು ರಾತ್ರಿ 11 ಗಂಟೆಗೆ ಈ ರೈಲು ಬೆಂಗಳೂರಿಗೆ ಹೊರಟಿತ್ತು. ಈ ರೈಲು ಮಂಡ್ಯ ಸಮೀಪ ಬರುತ್ತಿದ್ದಂತೆ, ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಚಾಕು, ತಲ್ವಾರ್ ತೋರಿಸಿ, ಕಬ್ಬಿಣದ ರಾಡ್ ತೋರಿಸಿ ಬೆದರಿಕೆ ಹಾಕಿದ ಮೂವರ ತಂಡ, ಅವರಿಂದ ಚಿನ್ನಾಭರಣ ಹಾಗೂ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.