ಭಾರತ, ಫೆಬ್ರವರಿ 12 -- Train Robbery: ರೈಲ್ವೆ ಪ್ರಯಾಣಿಕರ ಸೋಗಿನಲ್ಲಿ ಮೈಸೂರು- ಬೆಂಗಳೂರು ಮೆಮು ರೈಲು ಏರಿ, ಪ್ರಯಾಣಿಕರನ್ನು ಬೆದರಿಸಿ ದರೋಡೆ ಮಾಡಿದ ಪ್ರಕರಣ ಸಂಬಂಧಿಸಿ ರೈಲ್ವೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಮೈಸೂರು- ಬೆಂಗಳೂರು ಮೆಮು ರೈಲು ಏರಿದ ಶಂಕಿತರು ಚಾಕು, ಚೂರಿ, ಕಬ್ಬಿಣದ ರಾಡ್‌ ಹಿಡಿದು ಪ್ರಯಾಣಿಕರನ್ನು ಬೆದರಿಸಿ ಅವರಿಂದ ಹಣ, ಚಿನ್ನಾಭರಣ ದೋಚಿದ್ದರು. ಎರಡು ದಿನ ಹಿಂದೆ (ಫೆ 10) ಈ ದರೋಡೆ ನಡೆದಿತ್ತು. ಈ ದರೋಡೆ ಪ್ರಕರಣವು ರೈಲ್ವೆ ಪ್ರಯಾಣಿಕರಲ್ಲಿ ಕಳವಳಕ್ಕೆ ಕಾರಣವಾಗಿತ್ತು.

ಮೈಸೂರಿನಿಂದ ಬೆಂಗಳೂರಿಗೆ ಹೊರಟ ಮೆಮು ರೈಲಿಗೆ ಮೈಸೂರು ನಿಲ್ದಾಣದ ಒಂದು ತುದಿಯಲ್ಲಿ ನಿಂತಿದ್ದ ಶಂಕಿತ ಆರೋಪಿಗಳು ಪ್ರಯಾಣಿಕರಂತೆ ರೈಲು ಏರಿದ್ದರು. ಫೆ 10 ರಂದು ರಾತ್ರಿ 11 ಗಂಟೆಗೆ ಈ ರೈಲು ಬೆಂಗಳೂರಿಗೆ ಹೊರಟಿತ್ತು. ಈ ರೈಲು ಮಂಡ್ಯ ಸಮೀಪ ಬರುತ್ತಿದ್ದಂತೆ, ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಚಾಕು, ತಲ್ವಾರ್ ತೋರಿಸಿ, ಕಬ್ಬಿಣದ ರಾಡ್ ತೋರಿಸಿ ಬೆದರಿಕೆ ಹಾಕಿದ ಮೂವರ ತಂಡ, ಅವರಿಂದ ಚಿನ್ನಾಭರಣ ಹಾಗೂ ...