Bengaluru, ಮಾರ್ಚ್ 23 -- ಹೊಸ ಹೊಸ ಚಲನಚಿತ್ರಗಳು ಈಗ ಒಟಿಟಿ ವೇದಿಕೆಗಳಲ್ಲಿ ಬೇಗನೇ ಕಾಣಿಸಿಕೊಳ್ಳುತ್ತಿವೆ. ಜನರ ಬೇಡಿಕೆ ಒಂದೆಡೆಯಾದರೆ, ವಿವಿಧ ಚಿತ್ರರಂಗದ ಸ್ಪರ್ಧೆಯಿಂದಾಗಿ ಜನರು ಬಯಸುವಂತೆ, ಹೊಸ ಚಿತ್ರಗಳನ್ನು ಆದ್ಯತೆಯಲ್ಲಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಒಟಿಟಿ ವೇದಿಕೆಗಳ ನಡುವಿನ ಸ್ಪರ್ಧೆಯೂ ಇದಕ್ಕೆ ಕಾರಣವಾಗಿದೆ. ಈ ಬಾರಿ ತೆಲುಗಿನ ಪ್ರಸಿದ್ಧ ನಟರಾದ ರವಿತೇಜ ಅವರ ಕ್ರ್ಯಾಕ್ ಮತ್ತು ಶ್ರೀ ವಿಷ್ಣು ಅಲ್ಲೂರಿ ಅವರ ಚಿತ್ರಗಳು ಒಂದೇ ದಿನ ಒಟಿಟಿಗೆ ಪಾದಾರ್ಪಣೆ ಮಾಡಿವೆ. ಈಗಾಗಲೇ ಆಹಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ತೆಲುಗು ಚಲನಚಿತ್ರಗಳು ಇತ್ತೀಚೆಗೆ ಅಮೆಜಾನ್ ಪ್ರೈಮ್‌ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿವೆ. ಅಮೆಜಾನ್ ಪ್ರೈಮ್ ಇದನ್ನು ಅಧಿಕೃತವಾಗಿ ಘೋಷಿಸಿದೆ.

ರವಿತೇಜ ಮುಖ್ಯ ಪಾತ್ರದಲ್ಲಿ ನಟಿಸಿರುವ ಕ್ರ್ಯಾಕ್ ಚಿತ್ರವನ್ನು ಗೋಪಿಚಂದ್ ಮಾಲಿನೇನಿ ನಿರ್ದೇಶಿಸಿದ್ದಾರೆ. 2021 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ...