ಭಾರತ, ಡಿಸೆಂಬರ್ 9 -- ಧಾರವಾಡ: ಮಕ್ಕಳು ಕಾಣುವುದನ್ನು ಕುತೂಹಲದ ಕಣ್ಣಿನಿಂದ ಕಾಣುವಂತಾಗಬೇಕು ಎಂಬ ಕಿವಿಮಾತನ್ನು ಹೇಳುವ ಮೂಲಕ ಮಕ್ಕಳಿಗೆ ಲಭ್ಯ ಇರುವಂತಹ ವಿಜ್ಞಾನ ಮತ್ತು ಗಣಿತ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದರು ಸರಕಾರಿ ಪ್ರೌಢಶಾಲೆ ಚಿಮ್ಮಲಗಿಯ ಮುಖ್ಯೋಪಾಧ್ಯಾಯ ನಾರಾಯಣ ಬಾಬಾನಗರ.

ಅವರು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಧಾರವಾಡ ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗಾಗಿ ಬುಧವಾರ (ಡಿ.7) ಏರ್ಪಡಿಸಿದ ಜ್ಞಾನದೀಪ ವೆಬಿನಾರ್‌ನಲ್ಲಿ ವಿಜ್ಞಾನ ಸ್ಪರ್ಧೆಗಳಿಗೆ ಸ್ಪರ್ಧೆ ಹೇಗೆ ? ಎಂಬ ವಿಷಯ ಪ್ರಸ್ತುತಿ ಮಾಡಿದರು.

NCERT ಯಿಂದ ಪ್ರೌಢಶಾಲೆಯ ಮಕ್ಕಳಿಗೆ ನಡೆಸಲಾಗುವ ವಿಜ್ಞಾನ ಪ್ರದರ್ಶನ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇನಸ್ಪೈಯರ್‌ ಅವಾರ್ಡ್ ಅಥವಾ ಮಾನಕ ಎಂದು ಕರೆಯಲಾಗುವ ಕಾರ್ಯಕ್ರಮ , ವಿಜ್ಞಾನ ನಾಟಕ ಸ್ಪರ್ಧೆ , ಮಕ್ಕಳ ವಿಜ್ಞಾನ ಗೋಷ್ಠಿ , ಮಕ್ಕಳ ವಿಜ್ಞಾನ ಸಮಾವೇಶ, ಗ್ರಾಮೀಣ ತಂತ್ರಜ್ಞಾನ ರಸಪ್ರಶ್ನೆ ಹೀಗೆ ತಂತ್ರಜ್ಞಾನ ಆಧಾರಿತ ಸ್ಪರ್ಧೆ ...