ಭಾರತ, ಡಿಸೆಂಬರ್ 6 -- Sugar Factory: ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ 'ಶುಗರ್ ಫ್ಯಾಕ್ಟರಿ' ಚಿತ್ರ ಆರಂಭದ ದಿನದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇದೀಗ ಆ ಕುತೂಹಲಕ್ಕೆ ಮತ್ತಷ್ಟು ಒಗ್ಗರಣೆ ಹಾಕಿದೆ ಚಿತ್ರತಂಡ. ಅಂದರೆ, ಹೊಸ ವರ್ಷಕ್ಕೆ ಹೊಸ ಹಾಡಿನ ಮೂಲಕ ಆಗಮಿಸಿದೆ.

ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಬೆಂಗಳೂರಿನ ಮಂತ್ರಿ ಸ್ಕೇರ್‌ನಲ್ಲಿ ನೆರದಿದ್ದ ಅಪಾರ ಜನಸ್ತೋಮ ಶೀರ್ಷಿಕೆ ಹಾಡು ಬಿಡುಗಡೆಗೆ ಸಾಕ್ಷಿಯಾದರು. ಅಲ್ಲಿದ್ದ ಆರು ಜನ ಸಿನಿಪ್ರೇಕ್ಷಕರೇ, ಈ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಪಾರ್ಟಿಯಲ್ಲಿ ಹಾಡಿ, ಕುಣಿಯುವ ಈ ಹಾಡು,‌ ಪಾರ್ಟಿ ಪ್ರಿಯರಿಗೆ ಸರ್ವಕಾಲಕ್ಕೂ ಮೆಚ್ಚುಗೆಯ ಗೀತೆಯಾಗಲಿದೆ. ತಮ್ಮ ವಿಶಿಷ್ಟ ಕಂಠದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ, ಈ ಹಾಡನ್ನು ಬರೆದು ಹಾಡಿದ್ದಾರೆ.

ರುಚಿರ ವೈದ್ಯ English rapಗೆ ಧ್ವನಿಯಾಗಿದ್ದಾರೆ. ಕಬೀರ್ ರಫಿ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹ...