Bengaluru, ಮಾರ್ಚ್ 31 -- Sikandar Box Office Collection: ಬಾಲಿವುಡ್‌ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಸಿಕಂದರ್‌ ಸಹ ರೇಸ್‌ನಲ್ಲಿತ್ತು. ಅದರಂತೆ, ದೊಡ್ಡ ಮಟ್ಟದ ಪ್ರಚಾರದ ನಡುವೆ, ಮಾ. 30ರ ಈದ್‌ ಹಬ್ಬದ ಪ್ರಯುಕ್ತ ಸಿಕಂದರ್‌ ಸಿನಿಮಾ ಸಾವಿರಾರು ಸ್ಕ್ರೀನ್‌ಗಳಲ್ಲಿ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಬಿಡುಗಡೆ ಆಗಿತ್ತು. ಸಲ್ಮಾನ್‌ ಖಾನ್‌, ರಶ್ಮಿಕಾ ಮಂದಣ್ಣ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ತಮಿಳು ನಿರ್ದೇಶಕ ಎ. ಆರ್‌. ಮುರುಗದಾಸ್‌ ಸಿಕಂದರ್‌ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇಂತಿಪ್ಪ ಸಿನಿಮಾ ಮೊದಲ ದಿನ ಗಳಿಕೆ ವಿಚಾರದಲ್ಲಿ ಹಲವು ದಾಖಲೆ ಬರೆಯಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಆ ಲೆಕ್ಕಾಚಾರವೀಗ ಹುಸಿಯಾಗಿದೆ.

'ಸಿಕಂದರ್' ಚಿತ್ರ ಬಿಡುಗಡೆಯಾದ ಮೊದಲ ದಿನ ಅಂದರೆ ಭಾನುವಾರ ತನ್ನ ಬಜೆಟ್‌ನ ಶೇಕಡಾ 20ರಷ್ಟು ಮೊತ್ತವನ್ನೂ ಸಂಗ್ರಹಿಸಿಲ್ಲ. ಪ್ರೇಕ್ಷಕರಿಗೂ ಸಿನಿಮಾ ಹಿಡಿಸಿಲ್ಲ ಎಂಬುದು ಒಂದೆಡೆಯಾದರೆ, ಆನ್‌ಲೈನ್‌ ಸೋರಿಕೆ ಚಿತ್ರಕ್ಕೆ ದೊಡ್ಡ ಪೆಟ್ಟು ನೀಡಿತ್ತು. ಇದು ...