Bangalore, ಫೆಬ್ರವರಿ 24 -- ಭಾರತದ ಮಹಾ ಶಿವಾಲಯಗಳಲ್ಲಿ ಒಂದೆಂದು ಜನಪ್ರಿಯವಾಗಿ ಕರೆಯಲ್ಪಡುವ ಭೂತೇಶ್ವರ ಮಹಾದೇವ್ ದೇವಾಲಯವು ಛತ್ತೀಸ್ಗಢದ ಗರಿಯಾಬಂದ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಶೈವ ಕ್ಷೇತ್ರವಾಗಿದೆ. ಈ ದೇವಾಲಯವು ಸಾಕಷ್ಟು ಮಹತ್ವದ ಶಿವಲಿಂಗವನ್ನು ಹೊಂದಿದೆ, ಇದು ಕಾಲಾನಂತರದಲ್ಲಿ ತಾನಾಗಿಯೇ ಬೆಳೆಯುತ್ತಿದೆ ಎಂದು ಭಕ್ತರು ನಂಬುತ್ತಾರೆ. ಈ ಭವ್ಯವಾದ ದೇವಾಲಯಕ್ಕೆ ಪ್ರತಿವರ್ಷ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಈ ದೇವಾಲಯದ ಮಹತ್ವದ ಬಗ್ಗೆ ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ವಿವರಿಸಿದ್ದಾರೆ.
ದೂರದಿಂದ ನೋಡಿದಾಗ ಇದು ದೊಡ್ಡ ಬಂಡೆಯಂತೆ ಕಂಡರೂ ಸಮೀಪಕ್ಕೆ ಹೋಗಿ ನೋಡಿದರಷ್ಟೇ ಇಲ್ಲಿನ ಶಿವಲಿಂಗವನ್ನು ಕಣ್ತುಂಬಿಕೊಳ್ಳಬಹುದು. ಬಯಲಿನ ಹೊರಗೆ ಹಚ್ಚ ಹಸಿರಿನ ಮಧ್ಯೆ ಸ್ವಯಂಭುವಿನಂತೆ ನೆಲೆಗೊಂಡಿರುವ ಈ ಶಿವಲಿಂಗವು ನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿನ ಶಿವಲಿಂಗ ಬೆಳೆಯುುತ್ತಲೇ ಇರುತ್ತದೆ ಎಂಬುದೇ ವಿಶೇಷ. ಈ ವಿಚಿತ್ರತೆಯನ್ನು ನೋಡಲು ದೇವಾಲಯಕ್ಕೆ ದೇಶದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.