Bangalore, ಫೆಬ್ರವರಿ 24 -- ಭಾರತದ ಮಹಾ ಶಿವಾಲಯಗಳಲ್ಲಿ ಒಂದೆಂದು ಜನಪ್ರಿಯವಾಗಿ ಕರೆಯಲ್ಪಡುವ ಭೂತೇಶ್ವರ ಮಹಾದೇವ್ ದೇವಾಲಯವು ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಶೈವ ಕ್ಷೇತ್ರವಾಗಿದೆ. ಈ ದೇವಾಲಯವು ಸಾಕಷ್ಟು ಮಹತ್ವದ ಶಿವಲಿಂಗವನ್ನು ಹೊಂದಿದೆ, ಇದು ಕಾಲಾನಂತರದಲ್ಲಿ ತಾನಾಗಿಯೇ ಬೆಳೆಯುತ್ತಿದೆ ಎಂದು ಭಕ್ತರು ನಂಬುತ್ತಾರೆ. ಈ ಭವ್ಯವಾದ ದೇವಾಲಯಕ್ಕೆ ಪ್ರತಿವರ್ಷ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಈ ದೇವಾಲಯದ ಮಹತ್ವದ ಬಗ್ಗೆ ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ವಿವರಿಸಿದ್ದಾರೆ.

ದೂರದಿಂದ ನೋಡಿದಾಗ ಇದು ದೊಡ್ಡ ಬಂಡೆಯಂತೆ ಕಂಡರೂ ಸಮೀಪಕ್ಕೆ ಹೋಗಿ ನೋಡಿದರಷ್ಟೇ ಇಲ್ಲಿನ ಶಿವಲಿಂಗವನ್ನು ಕಣ್ತುಂಬಿಕೊಳ್ಳಬಹುದು. ಬಯಲಿನ ಹೊರಗೆ ಹಚ್ಚ ಹಸಿರಿನ ಮಧ್ಯೆ ಸ್ವಯಂಭುವಿನಂತೆ ನೆಲೆಗೊಂಡಿರುವ ಈ ಶಿವಲಿಂಗವು ನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿನ ಶಿವಲಿಂಗ ಬೆಳೆಯುುತ್ತಲೇ ಇರುತ್ತದೆ ಎಂಬುದೇ ವಿಶೇಷ. ಈ ವಿಚಿತ್ರತೆಯನ್ನು ನೋಡಲು ದೇವಾಲಯಕ್ಕೆ ದೇಶದ...