ಭಾರತ, ಮಾರ್ಚ್ 25 -- Salman Khan Movies on OTT: ಸಿಕಂದರ್‌ ಸಿನಿಮಾಕ್ಕೆ ಸಲ್ಮಾನ್‌ ಖಾನ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿರಬಹುದು. ಈ ಸಿನಿಮಾ ಆಗಮಿಸುವ ಮುನ್ನ ಸಲ್ಮಾನ್‌ ಖಾನ್‌ ನಟಿಸಿದ ಇತರೆ ಸಿನಿಮಾಗಳನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ಒಟಿಟಿಯಲ್ಲಿ ನೋಡಬಹುದಾದ ಸಲ್ಮಾನ್‌ ಖಾನ್‌ ಟಾಪ್‌ 10 ಸಿನಿಮಾಗಳ ವಿವರ ಇಲ್ಲಿದೆ.

ವಾಂಟೆಡ್‌: ವಾಂಟೆಡ್‌ 2009ರಲ್ಲಿ ಬಿಡುಗಡೆಯಾದ ಸಲ್ಮಾನ್‌ ಖಾನ್‌ ಸಿನಿಮಾ. ಈ ಆಕ್ಷನ್‌ ಥ್ರಿಲ್ಲರ್‌ ಸಿನಿಮಾಕ್ಕೆ ಪ್ರಭುದೇವ ಆಕ್ಷನ್‌ ಕಟ್‌ ಹೇಳಿದ್ದರು. ಬೋನಿ ಕಪೂರ್‌ ನಿರ್ಮಾಣ ಮಾಡಿದ್ದಾರೆ. ಇದು ತೆಲುಗಿನ ಪೋಕಿರಿ ಸಿನಿಮಾದ ಹಿಂದಿ ರಿಮೇಕ್‌. ಪ್ರಕಾಶ‌ ರಾಜ್‌,ಆಯೇಶ ಟಾಕಿಯಾ, ವಿನೋದ್‌ ಖನ್ನಾ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾವನ್ನು ಜೀ5 ಒಟಿಟಿಯಲ್ಲಿ ನೋಡಬಹುದು.

ಸಲ್ಮಾನ್‌ ಖಾನ್‌ ನಟಿಸಿದ ಈ ಸೂಪರ್‌ಹಿಟ್‌ ಸಿನಿಮಾವನ್ನು ಅಮೆಜಾನ್‌ ಪ್ರೈಮ್‌ ವಿಡಿಯದಲ್ಲಿ ನೋಡಬಹುದು. ಲವ್ವರ್‌ಬಾಯ್‌ ಆಗಿದ್ದ ಸಲ್ಮಾನ್‌ ಖಾನ್‌ರನ್ನು ಪೊಲೀಸ್‌ ಅಧಿಕಾರಿಯಾಗಿ ಚಿತ್ರಿಸಿದ ಸಿನಿಮಾ ಇದ...