Bangalore, ಏಪ್ರಿಲ್ 9 -- Romantic Thriller Movie: ಟೋವಿನ್ ಥಾಮಸ್ ನಾಯಕನಾಗಿ ನಟಿಸಿರುವ ಮಲಯಾಳಂ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಮಾಯಾನದಿಯನ್ನು ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಬಹುದು. ಈ ಸಿನಿಮಾದ ಹಿಂದಿ ಮತ್ತು ತೆಲುಗು ಆವೃತ್ತಿಗಳೂ ಕೂಡ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಯೂಟ್ಯೂಬ್‌ನಲ್ಲಿ 4ಕೆ ವರ್ಷನ್ ಅನ್ನು ಯಾವುದೇ ಪಾವತಿಯಿಲ್ಲದೆ ಉಚಿತವಾಗಿ ವೀಕ್ಷಿಸಬಹುದು. ಐಶ್ವರ್ಯ ಲಕ್ಷ್ಮಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆಶಿಕ್ ಅಬು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

2017ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಚಿತ್ರ ಕಮರ್ಷಿಯಲ್ ಆಗಿ ಹಿಟ್ ಆಗಿತ್ತು. 2010-2020ರ ಅವಧಿಯಲ್ಲಿ ಬಿಡುಗಡೆಯಾದ ಟಾಪ್ 25 ಉತ್ತಮ ಮಲಯಾಳಂ ಸಿನಿಮಾಗಳಲ್ಲಿ ಮಯಾನದಿ ಒಂದಾಗಿದೆ. ಕಥಾವಸ್ತು, ಟೋವಿನ್ ಥಾಮಸ್ ಮತ್ತು ಐಶ್ವರ್ಯ ಲಕ್ಷ್ಮಿಯ ಅಭಿನಯ ಮತ್ತು ಅವರ ಜೋಡಿ ಜನಪ್ರಿಯತೆ ಗಳಿಸಿತು. ಫ್ರೆಂಚ್ ಸಿನಿಮಾ ಬ್ರೀತ್‌ಲೆಸ್‌ನಿಂದ ಸ್ಫೂರ್ತಿ ಪಡೆದು ಮಯಾನದಿ ನಿರ್ಮಾಣವಾಗಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಟ್ವಿಸ್ಟ್ ಪ್ರ...