ಭಾರತ, ಡಿಸೆಂಬರ್ 6 -- ನವದೆಹಲಿ: ಸ್ಮಾರ್ಟ್‌ಫೋನ್‌ ಜಗತ್ತೇ ಹಾಗೆ, ಇಲ್ಲಿ ನಿತ್ಯವೂ ಹೊಸತನ, ಇಂದು ಹೊಸತು ಎನಿಸಿದ್ದು, ನಾಳೆ ಹಳತಾಗಿ ಅದರ ಸ್ಥಾನವನ್ನು ಮತ್ತೊಂದು ಆಕ್ರಮಿಸಿಕೊಂಡು ಬಿಟ್ಟಿರುತ್ತದೆ. ಅದರ ಆಯಸ್ಸು ಕೂಡ ಹೆಚ್ಚು ದಿನಗಳೇನು ಇರದು. ಹರಿಯುವ ನದಿಯಂತಿರುವ ಸ್ಮಾರ್ಟ್‌ಫೋನ್‌ ಕ್ಷೇತ್ರ, ನಿತ್ಯವೂ ಹೊಸ ಹೊಸ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳನ್ನು ಜಗತ್ತಿಗೆ ಪರಿಚಯಿಸುತ್ತಿರುತ್ತದೆ.

ಅದರಂತೆ ಸ್ಮಾರ್ಟ್‌ಫೋನ್‌ ಕ್ಷೇತ್ರದ ದಿಗ್ಗಜ ರಿಯಲ್ ಮಿ ಕಂಪನಿಯು ಹೊಸ ಸ್ಮಾರ್ಟ್‌ಫೋನ್‌ವೊಂದನ್ನು ಬಿಡುಗಡೆ ಮಾಡುತ್ತಿದ್ದು, ಅತ್ಯಂತ ವೇಗದ ಚಾರ್ಜಿಂಗ್‌ಗೆ ಈ ಸ್ಮಾರ್ಟ್‌ಫೋನ್‌ ಹೆಸರು ಮಾಡಲಿದೆ ಎಂದು ನಿರೀಕ್ಷೆ ಮಾಡಲಿದೆ.

ಜಿಟಿ ನಿಯೋ 5 (Realme GT Neo 5) ಹೆಸರಿನ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿರುವ ರಿಯಲ್‌ ಮಿ ಕಂಪನಿ, ಇದುವರೆಗೂ ನೋಡಿರದ ಅತ್ಯಂತ ವೇಗದ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ ಎನ್ನಲಾಗಿದೆ. ಬರೋಬ್ಬರಿ 240W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇರಲಿದ್ದು, ಇದು ಹೊಸ ದಾಖಲೆಯಾಗಲಿದೆ ...